ಬಿಹಾರದಲ್ಲಿ ಮಹಾಘಟಬಂಧನವೇ ಸರ್ಕಾರ ರಚಿಸಲಿದೆ: ಫಲಿತಾಂಶದ ಟ್ರೆಂಡ್ ತಿರಸ್ಕರಿಸಿದ ಆರ್‌ಜೆಡಿ

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಆಡಳಿತರೂಢ ಎನ್ ಡಿಎ ಮುನ್ನಡೆ ಸಾಧಿಸಿದ್ದರೂ ಹಾವು-ಏಣಿ ಆಟದಲ್ಲಿ ಮಹಾಘಟಬಂಧನ್ ಗೂ ಸರ್ಕಾರ ರಚಿಸುವ ಅವಕಾಶ ಇದೆ. ಹೀಗಾಗಿ ಸದ್ಯದ ಟ್ರೆಂಡ್‌ ಹೊರತಾಗಿಯೂ ಬಿಹಾರದಲ್ಲಿ ಮಹಾಘಟಬಂಧನವೇ ಸರ್ಕಾರ ರಚಿಸಲಿದೆ ಎಂದು ಆರ್‌ಜೆಡಿ ವಿಶ್ವಾಸ ವ್ಯಕ್ತಪಡಿಸಿದೆ

Published: 10th November 2020 08:11 PM  |   Last Updated: 10th November 2020 08:11 PM   |  A+A-


RJD_Leaders_Tejashwi_yadav_Pratap1

ತೇಜ್ ಪ್ರತಾಪ್, ತೇಜಸ್ವಿ ಯಾದವ್

Posted By : Lingaraj Badiger
Source : PTI

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಆಡಳಿತರೂಢ ಎನ್ ಡಿಎ ಮುನ್ನಡೆ ಸಾಧಿಸಿದ್ದರೂ ಹಾವು-ಏಣಿ ಆಟದಲ್ಲಿ ಮಹಾಘಟಬಂಧನ್ ಗೂ ಸರ್ಕಾರ ರಚಿಸುವ ಅವಕಾಶ ಇದೆ. ಹೀಗಾಗಿ ಸದ್ಯದ ಟ್ರೆಂಡ್‌ ಹೊರತಾಗಿಯೂ ಬಿಹಾರದಲ್ಲಿ ಮಹಾಘಟಬಂಧನವೇ ಸರ್ಕಾರ ರಚಿಸಲಿದೆ ಎಂದು ಆರ್‌ಜೆಡಿ ವಿಶ್ವಾಸ ವ್ಯಕ್ತಪಡಿಸಿದೆ

ನಮ್ಮ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಂದ ದೊರೆತಿರುವ ಮಾಹಿತಿ ಪ್ರಕಾರ ಮಹಾಘಟಬಂಧನ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಆರ್‌ಜೆಡಿ ಹೇಳಿದೆ.

ಸಂಜೆ 8 ಗಂಟೆ ವರೆಗಿನ ಮಾಹಿತಿ ಪ್ರಕಾರ ಎನ್‌ಡಿಎ ಸ್ವಲ್ಪ ಮುನ್ನಡೆ ಸಾಧಿಸಿದೆ. ಆದರೆ ಸ್ಪಷ್ಟ ಬಹುಮತ ಪಡೆದಿಲ್ಲ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಸಹ ತೀವ್ರ ಪೈಪೋಟಿ ನೀಡುತ್ತಿದೆ.

‘ಎಲ್ಲ ಪ್ರದೇಶಗಳಲ್ಲಿರುವ ನಮ್ಮ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳ ಸಂಪರ್ಕದಲ್ಲಿದ್ದೇವೆ. ಅವರಿಂದ ದೊರೆತ ಮಾಹಿತಿ ಪ್ರಕಾರ, ಫಲಿತಾಂಶ ನಮ್ಮ ಪರ ಬರಲಿದೆ’ ಎಂದು ಆರ್‌ಜೆಡಿ ಟ್ವೀಟ್ ಮಾಡಿದೆ.

‘ಮಹಾಘಟಬಂಧನ ಸರ್ಕಾರ ರಚನೆಯಾಗುವುದು ನಿಶ್ಚಿತ. ಬಿಹಾರ ಬದಲಾವಣೆ ಬಯಸಿದೆ’ ಎಂದು ಆರ್‌ಜೆಡಿ ಹೇಳಿದೆ.

ಎಣಿಕೆ ಪ್ರಕ್ರಿಯೆ ಮುಗಿಯುವ ವರೆಗೂ ಮತ ಎಣಿಕೆ ಕೇಂದ್ರಗಳಲ್ಲಿಯೇ ಇರುವಂತೆ ಅಭ್ಯರ್ಥಿಗಳಿಗೆ ಮತ್ತು ಏಜೆಂಟ್‌ಗಳಿಗೆ ಪಕ್ಷವು ಸೂಚಿಸಿದೆ.

ಈ ಬಾರಿ ಶೇ 63ರಷ್ಟು ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆ ಏರಿಕೆಯಾದ ಕಾರಣ, ತಡರಾತ್ರಿಯವರೆಗೂ ಮತ ಎಣಿಕೆ ಕಾರ್ಯ ಮುಂದುವರಿಯಲಿದೆ ಎಂದು ಚುನಾವಣಾ ಆಯುಕ್ತರು ಮಧ್ಯಾಹ್ನವೇ ತಿಳಿಸಿದ್ದರು.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp