ಬಿಹಾರ ಚುನಾವಣೆ ಫಲಿತಾಂಶ: ಕೇವಲ 12 ಮತಗಳಿಂದ ಕ್ಷೇತ್ರವನ್ನು ಗೆದ್ದುಕೊಂಡ ಜೆಡಿಯು ಅಭ್ಯರ್ಥಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಬಿಜೆಪಿ ನೇತೃತ್ವದ ಎನ್ ಡಿಎಗೆ ಪ್ರಬಲ ಪೈಪೋಟಿ ನೀಡಿದ್ದು ಹಲವು ಕ್ಷೇತ್ರಗಳಲ್ಲಿ ನೇರಾ ನೇರ ಸ್ಪರ್ಧೆಯೊಡ್ಡಿತ್ತು.
ಚುನಾವಣೆ (ಸಂಗ್ರಹ ಚಿತ್ರ)
ಚುನಾವಣೆ (ಸಂಗ್ರಹ ಚಿತ್ರ)

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಬಿಜೆಪಿ ನೇತೃತ್ವದ ಎನ್ ಡಿಎಗೆ ಪ್ರಬಲ ಪೈಪೋಟಿ ನೀಡಿದ್ದು ಹಲವು ಕ್ಷೇತ್ರಗಳಲ್ಲಿ ನೇರಾ ನೇರ ಸ್ಪರ್ಧೆಯೊಡ್ಡಿತ್ತು.

ಅತ್ಯಂತ ಕಡಿಮೆ ಮತಗಳ ಪೈಪೋಟಿ ಚುನಾವಣೆ ಫಲಿತಾಂಶದೆಡೆಗೆ ತೀವ್ರ ಕುತೂಹಲ ಮೂಡಿಸಿತ್ತು. ಕೇವಲ ಒಂದು ಮತ ಚುನಾವಣೆಯ ಫಲಿತಾಂಶವನ್ನು ಬುಡಮೇಲು ಮಾಡಬಹುದೆನ್ನುವ ಮಾತು ಬಿಹಾರ ವಿಧಾನಸಭಾ ಚುನಾವಣೆಯ ಹಲವು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಸಾಬೀತಾಗಿದ್ದು, 12 ಮತಗಳಿಂದ ಜೆಡಿಯು ಪಕ್ಷದ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಹಿಲ್ಸಾ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ 12 ಮತಗಳಿಂದ ಗೆದ್ದಿರುವುದನ್ನು ಚುನಾವಣಾ ಆಯೋಗ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಆದರೆ ಆರ್ ಜೆಡಿ ಈ ಫಲಿತಾಂಶವನ್ನು ಪ್ರಶ್ನಿಸಿದೆ. ಜೆಡಿಯು ಪಕ್ಷದ ಕೃಷ್ಣಮುರಾರಿ ಶರಣ್ ಅಥವಾ ಪ್ರೇಮ್ ಮುಖಿಯಾ ಅವರು 61,848 ಮತಗಳನ್ನು ಪಡೆದಿದ್ದರೆ ಆರ್ ಜೆಡಿ ಪಕ್ಷದ ಎದುರಾಳಿ ಅತ್ರಿ ಮುನಿ ಅಥವಾ ಶಕ್ತಿ ಸಿಂಗ್ ಯಾದವ್ 61,836 ಮತಗಳನ್ನು ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com