ದೇಶ ತೆರಿಗೆ ಉಗ್ರತ್ವದಿಂದ ತೆರಿಗೆ ಪಾರದರ್ಶಕತೆಯತ್ತ ಸಾಗಿದೆ: ಪ್ರಧಾನಿ ಮೋದಿ

ಭಾರತ ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯತ್ತ ಸಾಗುತ್ತಿದೆ ಮತ್ತು ಈ ಬದಲಾವಣೆ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯಿಂದ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಮೋದಿ
ಮೋದಿ

ನವದೆಹಲಿ: ಭಾರತ ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯತ್ತ ಸಾಗುತ್ತಿದೆ ಮತ್ತು ಈ ಬದಲಾವಣೆ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯಿಂದ ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಕಟಕ್‌ನ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರವನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಅವರು, ತಂತ್ರಜ್ಞಾನದ ನೆರವಿನಿಂದ ಕಾನೂನುಗಳು ಮತ್ತು ನಿಯಮಗಳನ್ನು ಸುಧಾರಿಸಲಾಗಿದೆ. ನಾವು ಸ್ಪಷ್ಟ ಉದ್ದೇಶಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದೇವೆ ಹಾಗೂ ಅದೇ ಸಮಯಕ್ಕೆ ತೆರಿಗೆ ಆಡಳಿತದಲ್ಲಿ ಪರಿವರ್ತನೆ ಮಾಡುತ್ತಿದ್ದೇವೆ ಎಂದರು.

ಕಾನೂನು ಮತ್ತು ನ್ಯಾಯ ಮತ್ತು ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ  ರವಿಶಂಕರ್ ಪ್ರಸಾದ್, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕಿನ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಉಪಸ್ಥಿತರಿದ್ದರು.

2 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ದೂರಸಂಪರ್ಕ, ಆಟೊಮೊಬೈಲ್‌, ಔಷಧೋದ್ಯಮ ಸೇರಿದಂತೆ ಒಟ್ಟು ಹತ್ತು ಪ್ರಮುಖ ಉದ್ಯಮ ವಲಯಗಳಿಗೆ ಅನ್ವಯವಾಗುವ ‘ಉತ್ಪಾದನೆ ಆಧಾರಿತ ಉತ್ತೇಜನಾ ಯೋಜನೆ’ಗೆ(ಪಿಎಲ್‌ಐ) ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ‘ಆತ್ಮನಿರ್ಭರ ಭಾರತ’ ನಿರ್ಮಾಣದ ಗುರಿ ಸಾಧಿಸಲು ಈ ಯೋಜನೆಯು ಸಹಾಯ ಮಾಡಲಿದೆ. ತಯಾರಿಕಾ ವಲಯಕ್ಕೆ ದೊಡ್ಡ ಪ್ರಮಾಣದ ಪ್ರೋತ್ಸಾಹಧನ ನೀಡಲಿದ ಎಂದರು. 

ಈ ಯೋಜನೆಯಿಂದ ಪಿಎಲ್‌ಐ ಅಡಿ ಉತ್ತೇಜನೆಯ ರೂಪದಲ್ಲಿ ಐದು ವರ್ಷಗಳಲ್ಲಿ ನೀಡುವ ಹಣದ ಮೊತ್ತವು  2 ಲಕ್ಷ ಕೋಟಿ ರೂ. ತಲುಪುವ ಹಂತ. ಇದು ಉದ್ಯೋಗ ಸೃಷ್ಟಿ ಜೊತೆಗೆ, ಉದ್ಯಮ ವಲಯಗಳಿಗೆ ಉತ್ತೇಜನಕಾರಿಯಾಗಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com