ಬಾಂಗ್ಲಾದೇಶ ಸೇನೆಗೆ ಕುದುರೆ, ಶ್ವಾನ ದೇಣಿಗೆ ನೀಡಿದ ಭಾರತ

ಬಾಂಗ್ಲಾದೇಶ ಸೇನೆಗೆ ಭಾರತೀಯ ಸೇನೆ ತರಬೇತಿ ಪಡೆದಿರುವ ಕುದುರೆ ಮತ್ತು ಶ್ವಾನಗಳನ್ನು ನೀಡಿದೆ.
ಬಾಂಗ್ಲಾದೇಶ ಸೇನೆಗೆ ಕುದುರೆ, ಶ್ವಾನ ದೇಣಿಗೆ ನೀಡಿದ ಭಾರತ
ಬಾಂಗ್ಲಾದೇಶ ಸೇನೆಗೆ ಕುದುರೆ, ಶ್ವಾನ ದೇಣಿಗೆ ನೀಡಿದ ಭಾರತ

ನವದೆಹಲಿ: ಬಾಂಗ್ಲಾದೇಶ ಸೇನೆಗೆ ಭಾರತೀಯ ಸೇನೆ ತರಬೇತಿ ಪಡೆದಿರುವ ಕುದುರೆ ಮತ್ತು ಶ್ವಾನಗಳನ್ನು ನೀಡಿದೆ.

ಹೌದು,.. ಭಾರತ-ಬಾಂಗ್ಲಾದೇಶದ ನಡುವಿನ ಸ್ನೇಹ ಸೌಹಾರ್ದವೃದ್ಧಿಗಾಗಿ ಬಾಂಗ್ಲಾ ಸೇನೆಗೆ 20 ಮಿಲಿಟರಿ ಕುದುರೆಗಳು ಹಾಗೂ 10 ಶ್ವಾನಗಳನ್ನು ಭಾರತ ಉಡುಗೊರೆ ನೀಡಿದೆ. ಪೆಟ್ರಾಫೋಲ್ ಬೆನಾಪೋಲ್ ಇಂಟಿಗ್ರೇಟೆಡ್ ಪೋಸ್ಟ್ ಬಳಿ ಬಾಂಗ್ಲಾದೇಶ ಸೇನೆಯ ನಿಯೋಗ ಈ ಉಡುಗೊರೆಯನ್ನು ಸ್ವೀಕರಿಸಿದೆ.  ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸ್ನೇಹ ಸೌಹಾರ್ದವೃದ್ಧಿಗೆ ಈ ಉಡುಗೊರೆ ಸಹಾಯಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.

ಭಾರತೀಯ ಸೇನೆ ಪಶುವೈದ್ಯಕೀಯ ಮತ್ತು ರಿಮೌಂಟ್ ದಳ ನೆಲಬಾಂಬ್ಗಳನ್ನು ಪತ್ತೆ ಹಚ್ಚುವ ತರಬೇತಿ ಪಡೆದಿರುವ 20 ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತೀಯ ಸೇನೆ ಉಡುಗೊರೆಯಾಗಿ ನೀಡಿದೆ. ಭಾರತೀಯ ಸೇನಾ ನಿಯೋಗವನ್ನು ಬ್ರಹ್ಮಾಸ್ತ್ರ ಕಾರ್ಪ್ಸ್ ಮುಖ್ಯಸ್ಥ  ಮೇಜರ್ ಜನರಲ್ ನರಿಂದರ್ ಸಿಂಗ್ ಕ್ರೌಡ್ ನೇತೃತ್ವ ವಹಿಸಿದ್ದರೆ, ಬಾಂಗ್ಲಾದೇಶ ಸೇನಾ ನಿಯೋಗಕ್ಕೆ ಜೆಸ್ಸೋರ್ ಮೂಲದ ವಿಭಾಗದ ಕಮಾಂಡಿಂಗ್ ಮಾಡುತ್ತಿರುವ ಮೇಜರ್ ಜನರಲ್ ಮೊಹಮ್ಮದ್ ಹುಮಾಯೂನ್ ಕಬೀರ್ ನೇತೃತ್ವ ವಹಿಸಿದ್ದರು.

ಈ ವಿಶೇಷ ಸಮಾರಂಭವನ್ನು ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಪೆಟ್ರಪೋಲ್-ಬೆನಾಪೋಲ್ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ)ಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾರತೀಯ ಹೈಕಮಿಷನ್‌ನ ಬ್ರಿಗೇಡಿಯರ್ ಜೆ.ಎಸ್. ಚೀಮಾ ಅವರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಅವರು  "ಭಾರತೀಯ ಸೈನ್ಯದಲ್ಲಿ ಮಿಲಿಟರಿ ನಾಯಿಗಳ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ. ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಬಾಂಗ್ಲಾದೇಶದಂತಹ ಸ್ನೇಹಪರ ದೇಶಕ್ಕೆ ನಮ್ಮ ಸಹಾಯವನ್ನು ನೀಡಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಭದ್ರತೆಯ ವಿಷಯಕ್ಕೆ ಬಂದರೆ, ನಾಯಿಗಳು ತಮ್ಮ ಸಾಮರ್ಥ್ಯವನ್ನು  ಸಾಬೀತುಪಡಿಸಿವೆ ಎಂದು ಹೇಳಿದರು.

ಇನ್ನು ಪ್ರಸ್ತುತ ಭಾರತ ನೀಡಿರುವ ತರಬೇತಿ ಪಡೆದ ಕುದುರೆಗಳು ಮತ್ತು ಲ್ಯಾಂಡ್ ಮೈನ್ ಪತ್ತೆಯಲ್ಲಿ ನುರಿತವಾಗಿರುವ ಸೇನಾ ನಾಯಿಗಳನ್ನು ಬಾಂಗ್ಲಾದೇಶ ಸೇನೆಗೆ ನೀಡಲಾಗಿದೆ. ಈ ಹಿಂದೆ ಕೂಡ ಸಾಕಷ್ಟು ಸಂದರ್ಭದಲ್ಲಿ ಭಾರತ ಬಾಂಗ್ಲಾ ಸೇನೆಗೆ ನೆರವಿನ ಹಸ್ತ ಚಾಚಿದೆ. ಕಳೆದ ವರ್ಷ ಭಾರತ 10  ಶ್ವಾನಗಳನ್ನು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com