ದೀಪಾವಳಿ ನಂತರ ಮುಖ್ಯಮಂತ್ರಿಯಾಗಿ ನಿತೀಶ್ ವಚನ ಪ್ರಮಾಣ

ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಸತತ ಆರನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪಾಟ್ನಾ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಸತತ ಆರನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಸರ್ಕಾರ ರಚಿಸಲು ಅಗತ್ಯವಾಗಿರುವ “ಮ್ಯಾಜಿಕ್  ಸಂಖ್ಯೆ” ದಾಟಿದೆ. ಇದರೊಂದಿಗೆ ಎನ್‌ಡಿಎ ಮೈತ್ರಿಕೂಟದ ಜೆಡಿ(ಯು) ನಾಯಕ ನಿತೀಶ್ ಕುಮಾರ್  ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದೀಪಾವಳಿ ನಂತರ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಜೆಡಿ(ಯು) ನಾಯಕ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ. 

ನಿನ್ನೆ ಪ್ರಕಟಗೊಂಡ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟ 125, ಮಹಾಘಟ್‌ಬಂಧನ್ 110, ಎಲ್‌ಜೆಪಿ ಒಂದು ಹಾಗೂ ಇತರರು ಏಳು ಕ್ಷೇತ್ರಗಳಲ್ಲಿ ಗೆಲವು  ಸಾಧಿಸಿದ್ದಾರೆ. ಬಿಹಾರದ ಮುಂದಿನ  ಮುಖ್ಯಮಂತ್ರಿ  ನಿತೀಶ್ ಕುಮಾರ್ ಎಂದು ಬಿಜೆಪಿ ಈಗಾಗಲೇ   ಘೋಷಿಸಿದೆ. 

ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪಕ್ಷದ  ನಾಯಕ, ರಾಜ್ಯ ಉಪ ಮುಖ್ಯಮಂತ್ರಿ ಸುಶಿಲ್ ಕುಮಾರ್  ಮೋದಿ ಸ್ಪಷ್ಟಪಡಿಸಿದರು. ನಿತೀಶ್ ಕುಮಾರ್ ಅವರು 2000 (8 ದಿನಗಳು), 2005, 2010, 2015, 2017 ರಲ್ಲಿ ಒಟ್ಟು ಐದು ಬಾರಿ  ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿಯೇ  ಮುಂದುವರೆದಿದ್ದಾರೆ. ಜನತಾದಳ (ಸಂಯುಕ್ತ )  ಪಕ್ಷದ ಮುಖ್ಯಸ್ಥ ರಾಗಿರುವ ನಿತೀಶ್ ಕುಮಾರ್ ಅವರು 1977 ರ ಚುನಾವಣೆಯಲ್ಲಿ ನಳಂದಾ ಜಿಲ್ಲೆಯ ಹಾರ್ನೋತ್   ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ, ಸೋತಿದ್ದರು.   ನಂತರ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.  ಅವರು ವಿಧಾನಸಭಾ ಚುನಾವಣೆಯಲ್ಲಿ  ಸ್ಪರ್ಧಿಸದಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಆರು ಬಾರಿ (1989, 1991, 1996, 1998, 1999, 2004). ಗೆಲುವು ಸಾಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com