ಯುಎಸ್ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿವೇತನಕ್ಕೆ ದೆಹಲಿ ವಿದ್ಯಾರ್ಥಿನಿ ಮೋನಿಕಾ ಕುಮಾರಿ ಆಯ್ಕೆ

ಇಂದಿರಾ ಗಾಂಧಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯ(ಐಜಿಟಿಯುಡಬ್ಲ್ಯು)ದ ದ್ವಿತೀಯ ವರ್ಷದ ಎಂ.ಟೆಕ್ ವಿದ್ಯಾರ್ಥಿನಿ ಮೋನಿಕಾ ಕುಮಾರಿ ಅವರು ಅಮೆರಿಕದ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.
ಮೋನಿಕಾ ಕುಮಾರಿ
ಮೋನಿಕಾ ಕುಮಾರಿ

ನವದೆಹಲಿ: ಇಂದಿರಾ ಗಾಂಧಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯ(ಐಜಿಟಿಯುಡಬ್ಲ್ಯು)ದ ದ್ವಿತೀಯ ವರ್ಷದ ಎಂ.ಟೆಕ್ ವಿದ್ಯಾರ್ಥಿನಿ ಮೋನಿಕಾ ಕುಮಾರಿ ಅವರು ಅಮೆರಿಕದ ಸೈಬರ್ ಸೆಕ್ಯುರಿಟಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಭಾರತದ ಮೊದಲ ಮಹಿಳೆ ಎಂಬ ಗೌರವಕ್ಕೆ ಮೋನಿಕಾ ಪಾತ್ರರಾಗಿದ್ದು, 10 ಸಾವಿರ ಅಮೆರಿಕನ್ ಡಾಲರ್ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.

ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಸೈಬರ್-ಅಪಾಯವನ್ನು ಕಡಿಮೆ ಮಾಡಲು ಮೀಸಲಾಗಿರುವ ಹಣಕಾಸು ಸೇವೆಗಳ ಮಾಹಿತಿ ಹಂಚಿಕೆ ವಿಶ್ಲೇಷಣೆ ಕೇಂದ್ರ(ಎಫ್‌ಎಸ್-ಐಎಸ್ಎಸಿ) 2016 ರಿಂದ ಯುವತಿಯವರಿಗೆ ಈ ವಿದ್ಯಾರ್ಥಿ ವೇತನ ನೀಡುತ್ತಿದೆ.

ಎಫ್‌ಎಸ್-ಐಎಸ್‌ಎಸಿ ಪ್ರತಿ ವರ್ಷ ವಿಶ್ವದಾದ್ಯಂತ 14 ಮಹಿಳೆಯರನ್ನು ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡುತ್ತದೆ ಮತ್ತು ಅವರ ವೃತ್ತಿಜೀವನದಲ್ಲಿ ಹೆಚ್ಚಿನ ಸಾಧನೆ ಮಾಡಲು ಮಾರ್ಗದರ್ಶನ ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com