ಬಿಹಾರದಲ್ಲಿ 5 ಸೀಟು ಗೆದ್ದ ಖುಷಿಯಲ್ಲಿ ಎಐಎಂಐಎಂ: ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಲು ನಿರ್ಧಾರ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆದ್ದ ಖುಷಿಯಲ್ಲಿ ಅಸಾದುದ್ದೀನ್ ಒವೈಸಿಯವರ ಎಐಎಂಐಎಂ ಮುಂದಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೂಡ ಸ್ಪರ್ಧಿಸುವುದಾಗಿ ತಿಳಿಸಿದೆ.
ಅಸಾದುದ್ದೀನ್ ಒವೈಸಿ
ಅಸಾದುದ್ದೀನ್ ಒವೈಸಿ

ಕೋಲ್ಕತ್ತಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆದ್ದ ಖುಷಿಯಲ್ಲಿ ಅಸಾದುದ್ದೀನ್ ಒವೈಸಿಯವರ ಎಐಎಂಐಎಂ ಮುಂದಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೂಡ ಸ್ಪರ್ಧಿಸುವುದಾಗಿ ತಿಳಿಸಿದೆ.

ಅಸಾದುದ್ದೀನ್ ಒವೈಸಿಯವರ ಈ ನಿರ್ಧಾರ ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತಗಳಿಕೆಗೆ ಸವಾಲಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಎಡರಂಗ 2011ರಲ್ಲಿ ಸೋತ ನಂತರ ರಾಜ್ಯದ ಅಲ್ಪಸಂಖ್ಯಾತ ಮತಗಳು ಮಮತಾ ಬ್ಯಾನರ್ಜಿಯವರ ಟಿಎಂಸಿ ಪಾಲಾಗಿದ್ದವು.ರಾಜ್ಯದಲ್ಲಿ ಶೇಕಡಾ 30ರಷ್ಟು ಮುಸ್ಲಿಂ ಮತದಾರರಿದ್ದಾರೆ. ಒವೈಸಿಯವರ ಪ್ರಭಾವ ಕೇವಲ ಹಿಂದಿ ಮತ್ತು ಉರ್ದು ಮಾತನಾಡುವ ಸಮುದಾಯಕ್ಕೆ ಸೀಮಿತ ಎಂದು ಟಿಎಂಸಿ ನಾಯಕರು ಹೇಳುತ್ತಿದ್ದಾರೆ.

ಕಾಶ್ಮೀರ ನಂತರ ದೇಶದಲ್ಲಿ ಮುಸ್ಲಿಂ ಮತದಾರರು ಹೆಚ್ಚಾಗಿರುವುದು ಪಶ್ಚಿಮ ಬಂಗಾಳದಲ್ಲಿ. 294 ಸದಸ್ಯರ ಬಲದ ವಿಧಾನಸಭೆಯಲ್ಲಿ ಸುಮಾರು 100-110 ಸ್ಥಾನಗಳಲ್ಲಿ ನಿರ್ಣಾಯಕ ಅಂಶವೆಂದರೆ, ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮರು, 2019 ರವರೆಗೆ, ಟಿಎಂಸಿಯ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಭದ್ರಕೋಟೆಯಾಗಿ ಕಾರ್ಯನಿರ್ವಹಿಸಿದ್ದಾರೆ, ಅವರಲ್ಲಿ ಹೆಚ್ಚಿನವರು ಪಕ್ಷದ ಪರವಾಗಿ ಮತ ಚಲಾಯಿಸಿದ್ದಾರೆ, ಕೇಸರಿಪಡೆ ಬಿಜೆಪಿಯನ್ನು ಮಣಿಸಬಹುದು ಎಂಬ ವಿಶ್ವಾಸದಲ್ಲಿ ಟಿಎಂಸಿ ನಾಯಕರಿದ್ದರು.

ಆದರೆ ಇದೀಗ ಚುನಾವಣಾ ವೇದಿಕೆಗೆ ಎಐಎಂಐಎಂ ಪ್ರವೇಶವಾಗಿರುವುದರಿಂದ ಚುನಾವಣಾ ಕಣದ ರಂಗು ಮುಂದಿನ ವರ್ಷ ಬದಲಾಗುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com