6 ಲಕ್ಷ ಮಣ್ಣಿನ ಹಣತೆ ದೀಪಗಳನ್ನು ಹಚ್ಚುವ ಮೂಲಕ ಅಯೋಧ್ಯೆಯಲ್ಲಿ ಮತ್ತೆ ವಿಶ್ವ ದಾಖಲೆ ಸ್ಥಾಪನೆ

ಪುರಾತನ ನಗರಿ ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸರಯು ನದಿಯ ದಡದಲ್ಲಿ ಲಕ್ಷಾಂತರ ಮಣ್ಣಿನ ಹಣತೆ ದೀಪಗಳನ್ನು ಬೆಳಗಿಸುವುದರ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಲಾಗಿದೆ.
ದೀಪೋತ್ಸವ
ದೀಪೋತ್ಸವ

ಅಯೋಧ್ಯೆ: ಪುರಾತನ ನಗರಿ ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸರಯು ನದಿಯ ದಡದಲ್ಲಿ ಲಕ್ಷಾಂತರ ಮಣ್ಣಿನ ಹಣತೆ ದೀಪಗಳನ್ನು ಬೆಳಗಿಸುವುದರ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಲಾಗಿದೆ. 

ಸುಮಾರು 6.06569 ತೈಲ ದೀಪಗಳು ಬೆಳಗುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದೆ. ಸುಮಾರು 45 ನಿಮಿಷ ಬೆಳಗಿದ ಈ ದೀಪಗಳು ಸರಯು ನದಿಗೆ ಅತ್ಯಾಕರ್ಷಕ ಮೆರುಗು ನೀಡಿದವು. ಪ್ರಜ್ವಲಿಸಿದ ದೀಪಗಳು ಸರಯು ನದಿ ದಡದಲ್ಲಿ ಸೇರಿದ್ದ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ವಿಶೇಷ ಆನಂದವನ್ನು ನೀಡಿವೆ.

ರಾಮ್ ಕಿ ಪಾಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರತಿ ಬೆಳಗುವ ಮೂಲಕ ಲಕ್ಷ ದೀಪೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. 

ಇನ್ನು ಮುಂದಿನ ವರ್ಷ 7.51 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಮತ್ತೊಂದು ನೂತನ ದಾಖಲೆ ನಿರ್ಮಿಸಲಾಗುವುದು ಎಂದು ಯೋಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com