ಸಿಎಂ ವಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಬಿಜೆಪಿ ಮಾಜಿ ಸಚಿವನ ವಜಾ!

ಉತ್ತರಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜನ ವಿರೋಧಿ ನೀತಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಬಿಜೆಪಿ ಮಾಜಿ ಸಚಿವನನ್ನು ಪಕ್ಷ ವಜಾಗೊಳಿಸಿದೆ. 
ಲಖಿ ರಾಮ್ ಜೋಶಿ
ಲಖಿ ರಾಮ್ ಜೋಶಿ

ಡೆಹ್ರಾಡೂನ್: ಉತ್ತರಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜನ ವಿರೋಧಿ ನೀತಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಬಿಜೆಪಿ ಮಾಜಿ ಸಚಿವನನ್ನು ಪಕ್ಷ ವಜಾಗೊಳಿಸಿದೆ. 

ಸಿಎಂ ಅವರ ನೀತಿಗಳು ಮತ್ತು ನಡವಳಿಕೆ ಸರಿಯಿಲ್ಲ ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು ಎಂದು ಮಾಜಿ ಸಚಿವ ಲಖಿ ರಾಮ್ ಜೋಶಿ ಹೇಳಿದರು.

ಮಾಜಿ ಮಂತ್ರಿ, ಹಾಲಿ ಶಾಸಕರಾದ ಲಖಿ ರಾಮ್ ಜೋಶಿಯನ್ನು ಅಶಿಸ್ತಿನ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ. ಇದಕ್ಕೂ ಮುನ್ನ ಈ ಕುರಿತಂತೆ ಉತ್ತರಿಸುವಂತೆ ನೋಟಿಸ್ ನೀಡಲಾಗಿದ್ದು ಇದರಲ್ಲಿ ಅವರು ವಿಫಲರಾದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬನ್ಸಿಧರ್ ಭಗತ್ ತಿಳಿಸಿದ್ದಾರೆ. 

ಇದು ಆಂತರಿಕ ವಿಷಯವಾಗಿದ್ದು, ಲಖಿ ರಾಮ್ ಜೋಶಿ ಅವರು ಪ್ರಧಾನ ಮಂತ್ರಿಗೆ ದೂರು ನೀಡುವ ಬದಲು ರಾಜ್ಯ ಮುಖಂಡರಿಗೆ ತಿಳಿಸಿರಬೇಕು ಎಂದು ರಾಜ್ಯದ ಹಿರಿಯ ಬಿಜೆಪಿ ನಾಯಕರು ಹೇಳಿದ್ದಾರೆ.

ಉತ್ತರಾಖಂಡ ಬಿಜೆಪಿಯ ವಕ್ತಾರ ದೇವೇಂದ್ರ ಭಾಸಿನ್, "ಯಾರೂ ಪಕ್ಷಕ್ಕಿಂತ ಮೇಲಲ್ಲ ಮತ್ತು ಪಕ್ಷದಲ್ಲಿ ಯಾರಿಂದಲೂ ಅಶಿಸ್ತನ್ನು ನಿರೀಕ್ಷಿಸುವುದಿಲ್ಲ. ಯಾವುದೇ ಸಮಸ್ಯೆ ಇದ್ದರೆ ಮೊದಲು ಚರ್ಚಿಸಿ, ಸಂವಾದದ ಮೂಲಕ ಪರಿಹರಿಸಬಹುದು ಎಂದು ಹೇಳಿದರು.

ಅಮಾನತು ಕುರಿತಂತೆ ಪ್ರತಿಕ್ರಿಯಿಸಿದ ಜೋಶಿ, "ಇದು ಅನೈತಿಕ ಮತ್ತು ಸರ್ವಾಧಿಕಾರಿ ವರ್ತನೆ. ನಾನು ಮತ್ತೆ ಗೌರವಾನ್ವಿತ ಪ್ರಧಾನಿಗೆ ಪತ್ರ ಬರೆಯುತ್ತೇನೆ. ನಾನು ಹಿಂದೆ ಉತ್ತರಾಖಂಡ ರಾಜ್ಯಕ್ಕಾಗಿ ಹೋರಾಡಿದ್ದೇನೆ. ನನ್ನ ಜೀವನದುದ್ದಕ್ಕೂ ಸಂಘ(ಆರ್‌ಎಸ್‌ಎಸ್) ನಲ್ಲಿದ್ದೇನೆ ಶಿಸ್ತು ಮತ್ತು ತಪ್ಪುಗಳ ವಿರುದ್ಧ ಧ್ವನಿ ಎತ್ತಿದ್ದೇನೆ. ನಾನು ಅದೇ ರೀತಿ ಮಾಡುತ್ತೇನೆ ಎಂದರು. 

ಜೋಶಿ ಅವರು ಮೋದಿ ಅವರಿಗೆ ಬರೆದ ಪತ್ರದಲ್ಲಿ "ಇಂದು, ನಮ್ಮ ಪ್ರಸ್ತುತ ಮುಖ್ಯಮಂತ್ರಿ ಕಪ್ಪುಹಣವನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆಂದು ತಿಳಿದ ನಂತರ ಉತ್ತರಾಖಂಡದ ಜನರು ಆಘಾತಕ್ಕೊಳಗಾಗಿದ್ದಾರೆ. ಗೌರವಾನ್ವಿತ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತು. ರಾಷ್ಟ್ರಮಟ್ಟದಲ್ಲಿ ಉತ್ತರಾಖಂಡದ ನಿಲುವೇನು. ಇದನ್ನು ನಮ್ಮ ನಾಯಕತ್ವ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಬರೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com