ಕೋವಿಡ್-19 3ನೇ ಹಂತದ ಅಲೆ: ದೆಹಲಿಯಲ್ಲಿ ಒಂದೇ ದಿನ ಗರಿಷ್ಠ 104 ಸಾವು

ಮಾರಕ ಕೊರೋನಾ ವೈರಸ್ ಸೋಂಕಿನ ಮೂರನೇ ಹಂತದ ಅಲೆಗೆ ತತ್ತರಿಸಿ ಹೋಗಿರುವ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೊಬ್ಬರಿ 104 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದು ಈ ವರೆಗಿನ ಗರಿಷ್ಠ ಸಾವಿನ ಪ್ರಮಾಣವಾಗಿದೆ.
ಕೊರೋನಾ ವೈರಸ್
ಕೊರೋನಾ ವೈರಸ್

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿನ ಮೂರನೇ ಹಂತದ ಅಲೆಗೆ ತತ್ತರಿಸಿ ಹೋಗಿರುವ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೊಬ್ಬರಿ 104 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದು ಈ ವರೆಗಿನ ಗರಿಷ್ಠ ಸಾವಿನ ಪ್ರಮಾಣವಾಗಿದೆ.

ಈ ಬಗ್ಗೆ ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 7,053 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಅಂತೆಯೇ ನಿನ್ನೆ 104 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಇದು ದೆಹಲಿಯಲ್ಲಿ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಈ ಹಿಂದೆ ಜೂನ್ 16ರಂದು 93 ಮಂದಿ ಸೋಂಕಿತರು ಸಾವನ್ನಪ್ಪಿದ್ದರು. ಇದು ಈ ವರೆಗಿನ ಗರಿಷ್ಟ ಸಾವಿನ ಪ್ರಮಾಣವಾಗಿತ್ತು.

ಇನ್ನು ದೆಹಲಿಯಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ಇದೀಗ 4,67,028ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಈಗಾಗಲೇ 4.16 ಲಕ್ಷ ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು ದಿನ ನಿತ್ಯ ಸೋಂಕು ಪ್ರಕರಣಗಳ ಪತ್ತೆ ಪ್ರಮಾಣ ಶೇ.11.71ಕ್ಕೆ ಏರಿಕೆಯಾಗಿದೆ. ಆದರೆ ಇದೇ ರಾಷ್ಟ್ರೀಯ ಸರಾಸರಿ ಸೋಂಕು ಪ್ರಮಾಣ ಶೇ.3.8 ರಷ್ಟಿದೆ.

ಈ ಹಿಂದೆ ರಾಷ್ಟ್ರೀಯ ವಿಪತ್ತು ನಿಯಂತ್ರಣ ಕೇಂದ್ರ ದೆಹಲಿಯಲ್ಲಿ ಚಳಿಗಾಲದಲ್ಲಿ ಪ್ರತಿನಿತ್ಯ 15 ಸಾವಿರ ಹೊಸ ಪ್ರಕರಣಗಳು ದಾಖಲಾಗಬಹುದು ಎಂದು ಹೇಳಿತ್ತು. ಅದರಂತೆ ಕ್ರಮೇಣ ದೆಹಲಿಯಲ್ಲಿ ಹೊಸ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ,

ಇನ್ನು ಕೊರೋನಾ ಸೋಂಕಿನ ನಡುವೆಯೇ ದೆಹಲಿಯಲ್ಲಿ ವಾಯು ಗುಣಮುಟ್ಟ ತೀವ್ರ ಕುಸಿದಿದ್ದು, ಇದೂ ಕೂಡ ಸೋಂಕಿತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com