ಭಾರತದ ಪ್ರತಿದಾಳಿಗೆ 11 ಪಾಕಿ ಸೈನಿಕರು ಸಾವು, 16 ಮಂದಿಗೆ ತೀವ್ರ ಗಾಯ!
ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ 11 ಪಾಕಿ ಸೈನಿಕರು ಸಾವನ್ನಪ್ಪಿದ್ದು 16 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಸೇನಾಪಡೆಯ ಮೂಲಗಳು ತಿಳಿಸಿವೆ.
Published: 14th November 2020 04:02 PM | Last Updated: 14th November 2020 05:15 PM | A+A A-

ಭಾರತದ ಪ್ರತಿ ದಾಳಿಗೆ 11 ಪಾಕಿ ಸೈನಿಕರು ಸಾವು 16 ಮಂದಿಗೆ ತೀವ್ರ ಗಾಯ!
ಶ್ರೀನಗರ: ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ 11 ಪಾಕಿ ಸೈನಿಕರು ಸಾವನ್ನಪ್ಪಿದ್ದು 16 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಸೇನಾಪಡೆಯ ಮೂಲಗಳು ತಿಳಿಸಿವೆ.
ಉತ್ತರ ಕಾಶ್ಮೀರದಲ್ಲಿ ಪಾಕ್ ಸೇನೆಯಿಂದ ನಡೆದ ಅಪ್ರಚೋದಿತ ದಾಳಿಗೆ ಆರ್ಟಿಲರಿ ಗನ್ ಗಳಿಂದ ಭಾರತೀಯ ಸೇನೆ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ದಾಳಿಗೆ ಭಾರತದ ಐವರು ಭದ್ರತಾ ಸಿಬ್ಬಂದಿಗಳು ಹಾಗೂ 6 ನಾಗರಿಕರು ಸಾವನ್ನಪ್ಪಿದ್ದರು.
ಭಾರತೀಯ ಸೇನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪಾಕಿಸ್ತಾನದ ಬಂಕರ್ ಗಳು ನಾಶಗೊಂಡಿರುವುದು ಕಂಡುಬಂದಿದೆ. ಈ ದಾಳಿಯಲ್ಲಿ 11 ಪಾಕಿ ಯೋಧರು ಮೃತಪಟ್ಟಿದ್ದಾರೆ.
ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಭಯೋತ್ಪಾದಕರ ಲಾಂಚ್ ಪ್ಯಾಡ್ ಗಳೂ ಸಹ ನಾಶಗೊಂಡಿವೆ ಎಂದು ಸೇನೆ ತಿಳಿಸಿದೆ.