ಮಧ್ಯಪ್ರದೇಶ ಬಿಜೆಪಿ ಹಿರಿಯ ನಾಯಕ ಕೈಲಾಶ್ ಸಾರಂಗ್ ವಿಧಿವಶ

ಮಧ್ಯಪ್ರದೇಶದ ಬಿಜೆಪಿ ಹೀರಿಯ ನಾಯಕ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಕೈಲಾಶ್ ನಾರಾಯಣ್ ಸಾರಂಗ್ (86) ಅವರು ಶನಿವಾರ ವಿಧಿವಶರಾಗಿದ್ದಾರೆ. 
ಕೈಲಾಶ್ ನಾರಾಯಣ್ ಸಾರಂಗ್
ಕೈಲಾಶ್ ನಾರಾಯಣ್ ಸಾರಂಗ್

ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಹೀರಿಯ ನಾಯಕ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಕೈಲಾಶ್ ನಾರಾಯಣ್ ಸಾರಂಗ್ (86) ಅವರು ಶನಿವಾರ ವಿಧಿವಶರಾಗಿದ್ದಾರೆ. 

ವಯೋಸಹಜ ಖಾಸಿಯಿಂದ ಬಳಲುತ್ತಿದ್ದ ಕೈಲಾಶ್ ಸಾರಂಗ್ ಅವರು ಇಂದು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. 

ಕೈಲಾಶ್ ಸಾರಂಗ್ ಅವರು ಮಾಜಿ ಸಚಿವ ಹಾಗೂ ನರೇಲಾ ಶಾಸಕ ವಿಶ್ವಾಸ್ ಸಾರಂಗ್ ಅವರ ತಂದೆಯಾಗಿದ್ದಾರೆ. ತಮ್ಮ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಕೈಲಾಶ್ ಅವರು ಅಗಲಿದ್ದಾರೆ. 

ಕೈಲಾಶ್ ಸಾಂರಗ್ ಅವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಶ್ರೀ ಕೈಲಾಶ್ ಸಾರಂಗ್  ಅವರು ಮಧ್ಯಪ್ರದೇಶದಾದ್ಯಂತ ಬಿಜೆಪಿ ಪಕ್ಷವನ್ನು ಬಲಪಡಿಸಲು ಸಾಕಷ್ಟು ಶ್ರಮ ಪಟ್ಟಿದ್ದರು. ಕೈಲಾಶ್ ಅವರ ಶ್ರಮದಾಯಕ ಕೆಲಸ, ಸಂಸದರ ಪ್ರಗತಿಗಾಗಿ ಪಟ್ಟ ಪರಿಶ್ರಮವನ್ನು ಸ್ಮರಿಸಲಾಗುತ್ತದೆ. ಅವರ ನಿಧನದಿಂದ ಸಾಕಷ್ಟು ನೋವಾಗಿದ್ದು, ಅವರ ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com