ಬಿಹಾರಕ್ಕೆ ಸುಶೀಲ್ ಮೋದಿ ಬದಲು ದಲಿತ ನಾಯಕ ಕಾಮೇಶ್ವರ್ ಚೌಪಾಲ್ ನೂತನ ಡಿಸಿಎಂ?

ಬಿಹಾರದಲ್ಲಿ ಚುನಾವಣೆ ಮುಕ್ತಾಯಗೊಂಡು ಎನ್ ಡಿಎ ಮೈತ್ರಿಕೂಟದ ಮೊದಲ ಸಭೆ ನಡೆದಿದ್ದು, ಹಾಲಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರ ಬದಲು ಬಿಜೆಪಿ ದಲಿತ ನಾಯಕ ಕಾಮೇಶ್ವರ್ ಚೌಪಾಲ್ ಅವರನ್ನು ನೂತನ ಡಿಸಿಎಂ ಆಗಿ ನೇಮಕ ಮಾಡಲು ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿದೆ. 
ಬಿಹಾರಕ್ಕೆ ಸುಶೀಲ್ ಮೋದಿ ಬದಲು ದಲಿತ ನಾಯಕ ಕಾಮೇಶ್ವರ್ ಚೌಪಾಲ್ ನೂತನ ಡಿಸಿಎಂ?
ಬಿಹಾರಕ್ಕೆ ಸುಶೀಲ್ ಮೋದಿ ಬದಲು ದಲಿತ ನಾಯಕ ಕಾಮೇಶ್ವರ್ ಚೌಪಾಲ್ ನೂತನ ಡಿಸಿಎಂ?

ಪಾಟ್ನ: ಬಿಹಾರದಲ್ಲಿ ಚುನಾವಣೆ ಮುಕ್ತಾಯಗೊಂಡು ಎನ್ ಡಿಎ :ಮೈತ್ರಿಕೂಟದ ಮೊದಲ ಸಭೆ ನಡೆದಿದ್ದು, ಹಾಲಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರ ಬದಲು ಬಿಜೆಪಿ ದಲಿತ ನಾಯಕ ಕಾಮೇಶ್ವರ್ ಚೌಪಾಲ್ ಅವರನ್ನು ನೂತನ ಡಿಸಿಎಂ ಆಗಿ ನೇಮಕ ಮಾಡಲು ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿದೆ. 

ಚೌಪಾಲ್ ಅವರು ಪಾಟ್ನಾ ಏರ್ ಪೋರ್ಟ್ ಗೆ ಆಗಮಿಸುತ್ತಿದ್ದಂತೆಯೇ ಅವರ ಬೆಂಬಲಿಗರು ತಮ್ಮ ನಾಯಕನಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕೆಂಬ ಘೋಷಣೆ ಕೂಗಿದ್ದು, ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. 

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಟ್ರಸ್ಟ್ ನ 15 ಸದಸ್ಯರಲ್ಲಿ ಚೌಪಾಲ್ ಕೂಡ ಒಬ್ಬರಾಗಿರುವುದು ಗಮನಾರ್ಹ.

1989 ರ ನ.9 ರಂದು ನಡೆದಿದ್ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಚೌಪಾಲ್ ಶಿಲಾನ್ಯಾಸ ನೆರವೇರಿಸಿ ಮೊದಲ ಬಾರಿಗೆ ಅಡಿಪಾಯ ಹಾಕಿದ್ದರು. ಅಷ್ಟೇ ಅಲ್ಲದೇ ರಾಮ್ ವಿತ್ ರೋಟಿ ಅಂದರೆ ನಂಬಿಕೆ ಹಾಗೂ ಜೀವನೋಪಾಯ ಎರಡನ್ನೂ ಬೆಸೆಯುವ ಘೋಷಣೆಯನ್ನು ಮೊದಲಿಗರಾಗಿ ಘೋಷಿಸಿದ್ದರು.

ಚೌಪಾಲ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಕೂಗು ಕೇಳಿಬರುತ್ತಿದ್ದರೂ ಸಿಎಂ ನಿತೀಶ್ ಕುಮಾರ್ ಹೊಸ ಉಪಮುಖ್ಯಮಂತ್ರಿಯನ್ನು ಒಪ್ಪುವ ಸಾಧ್ಯತೆ ಕಡಿಮೆ ಇದೆ.

ಸುಶೀಲ್ ಮೋದಿಗೆ ಬಿಹಾರದಲ್ಲಿ ಅತಿ ಹೆಚ್ಚು ಮತ ಬ್ಯಾಂಕ್ ಇಲ್ಲದೇ ಇದ್ದರೂ ಸಹ ಹಣಕಾಸು ಸೇರಿದಂತೆ ಮಹತ್ವದ ಖಾತೆಗಳನ್ನು ನಿಭಾಯಿಸಿದ ಅನುಭವವಿದೆ ಎಂದು ಕೆಲವು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. 

ಒಂದು ವೇಳೆ ಚೌಪಾಲ್ ಅವರನ್ನು ಡಿಸಿಎಂ ಮಾಡಿದ್ದೇ ಆದಲ್ಲಿ ಸುಶೀಲ್ ಮೋದಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ರಾಮ್ ವಿಲಾಸ್ ಪಾಸ್ವಾನ್ ಅವರ ಸ್ಥಾನವನ್ನು ತುಂಬುವ ಕೆಲಸ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚೌಪಾಲ್ ಅವರನ್ನು ಡಿಸಿಎಂ ಮಾಡಿದ್ದೇ ಆದಲ್ಲಿ ಬಿಹಾರದಲ್ಲಿ ಬಿಜೆಪಿ ದಲಿತ ಓಟ್ ಬ್ಯಾಂಕ್ ಮಾಡಿಕೊಳ್ಳಬಹುದೆಂಬ ದೂರಾಲೋಚನೆಯೂ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com