ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮಾ ಪುಸ್ತಕದಲ್ಲಿ ಉಲ್ಲೇಖ: ಕಾಂಗ್ರೆಸ್ ಮೌನ; ಪಕ್ಷದ ನಾಯಕರ ಆಕ್ರೋಶ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆ ಪುಸ್ತಕಗಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ನಮೂದಿಸಿರುವ ಅಭಿಪ್ರಾಯಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿ-ಬರಾಕ್ ಒಬಾಮಾ(ಸಂಗ್ರಹ ಚಿತ್ರ)
ರಾಹುಲ್ ಗಾಂಧಿ-ಬರಾಕ್ ಒಬಾಮಾ(ಸಂಗ್ರಹ ಚಿತ್ರ)

ನವದೆಹಲಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆ ಪುಸ್ತಕಗಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ನಮೂದಿಸಿರುವ ಅಭಿಪ್ರಾಯಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದ ಕೆಲವು ಅತಿ ಅಸೂಯೆ ಹೊಂದಿರುವ ಸ್ನೇಹಿತರಿಗೆ ನಾನು ಒಂದು ವಿಷಯ ಹೇಳುತ್ತೇನೆ, ಕೆಲವು ಪ್ರಾಯೋಜಕತ್ವದ ಪ್ರಚಾರಗಳು ಮಾಡುತ್ತಿರುವ ಪುಸ್ತಕದಲ್ಲಿ ವ್ಯಕ್ತಿಯೊಬ್ಬರ ವೈಯಕ್ತಿಕ ದೃಷ್ಟಿಕೋನ, ಅಭಿಪ್ರಾಯಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಹಿಂದೊಮ್ಮೆ ನಾಯಕರನ್ನು ಸೈಕೊಪಾಥ್ ಮತ್ತು ಜನರಿಂದ, ಸಂಸ್ಥೆಗಳಿಂದ ಇಬ್ಘಾಗವಾದ ನಾಯಕ ಎಂದಿದ್ದರು. ಅಂತಹ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ, ಬೆಲೆಯೂ ಕೊಡುವುದಿಲ್ಲ ಎಂದು ಆರ್ ಎಸ್ ಸುರ್ಜೆವಾಲಾ ಹೇಳಿದ್ದಾರೆ.

ಆದರೆ ಕೆಲವು ಕಾಂಗ್ರೆಸ್ ನಾಯಕರು ಬರಾಕ್ ಒಬಾಮಾ ಅವರ ಅಭಿಪ್ರಾಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು ಸಂಸದ ಮಣಿಕ್ಕಮ್ ಠಾಗೋರ್, ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮಾ ಹೇಳಿರುವ ಮಾತುಗಳನ್ನು ಭಾರತೀಯರು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.

ಕೇವಲ 5-10 ನಿಮಿಷಗಳಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಬಗ್ಗೆ ತಿಳಿದುಕೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು. ರಾಹುಲ್ ಗಾಂಧಿಯವರ ವ್ಯಕ್ತಿತ್ವದ ಬಗ್ಗೆ ತೀರ್ಮಾನ ಕೊಡುವುದು ತಪ್ಪಾಗುತ್ತದೆ. ಧೂಳನ್ನು ನೀವು ಹೊಡೆದೋಡಿಸಬಹುದು, ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂದರು.

ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರ ಮನೋಭಾವನೆಗೆ ಬರಾಕ್ ಒಬಾಮಾ ನೋವುಂಟುಮಾಡಿದ್ದಾರೆ ಎಂದು ಆಚಾರ್ಯ ಪ್ರಮೋದ್ ಕೃಷ್ಣನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com