ಕೋವಿಡ್-19 ಸೋಂಕು: ಐಸಿಯುನಲ್ಲಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಗೆ ಚಿಕಿತ್ಸೆ 

ಕೋವಿಡ್-19 ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಗೆ ತೀವ್ರ ನಿಗಾ ಘಟಕ (ಐಸಿಯು) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
ಅಹ್ಮದ್ ಪಟೇಲ್
ಅಹ್ಮದ್ ಪಟೇಲ್

ಗುರುಗ್ರಾಮ: ಕೋವಿಡ್-19 ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಗೆ ತೀವ್ರ ನಿಗಾ ಘಟಕ (ಐಸಿಯು) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಗುರುಗ್ರಾಮದಲ್ಲಿರುವ ಮೆದಾಂತ ಆಸ್ಪತ್ರೆಯಲ್ಲಿ ಅಹ್ಮದ್ ಪಟೇಲ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ತಮಗೆ ಕೋವಿಡ್-19 ಸೋಂಕು ತಗುಲಿರುವುದನ್ನು ಅಹ್ಮದ್ ಪಟೇಲ್ ಅ.1 ರಂದು ಟ್ವೀಟ್ ಮೂಲಕ ತಿಳಿಸಿದ್ದರು. 

ನ.15 ರಂದು ಅಹ್ಮದ್ ಪಟೇಲ್ ಪುತ್ರ ಟ್ವೀಟ್ ಮಾಡಿದ್ದು, ತಮ್ಮ ತಂದೆ ಐಸಿಯುಗೆ ದಾಖಲಾಗಿರುವ ಮಾಹಿತಿಯನ್ನು ನೀಡಿದ್ದಾರೆ. 
"ಅಹ್ಮದ್ ಪಟೇಲ್ ಅವರ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆ ಮುಂದುವರೆದಿದೆ, ಶೀಘ್ರ ಚೇತರಿಕೆಯಾಗಲು ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯ ಎಂದು ಅವರು ಹೇಳಿದ್ದಾರೆ.  

ಕಾಂಗ್ರೆಸ್ ನ ನಾಯಕರಾದಿಯಾಗಿ ರಾಜಕೀಯ ಗಣ್ಯರು ಅಹ್ಮದ್ ಪಟೇಲ್ ಅವರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com