ಬಿಹಾರ ಸರ್ಕಾರ ರಚನೆ, ಉಪ ಮುಖ್ಯಮಂತ್ರಿ ನೇಮಕ ಬಗ್ಗೆ ಇಂದು ತೀರ್ಮಾನ: ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ 

ಬಿಹಾರ ವಿಧಾನಸಭೆಗೆ ಆಯ್ಕೆಯಾಗಿರುವ ಎನ್ ಡಿಎಯ ಹೊಸ ಶಾಸಕರು ಪಾಟ್ನಾದಲ್ಲಿ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಸೇರಲಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಜೆಡಿಯು, ಬಿಜೆಪಿ, ಹಿಂದೂಸ್ತಾನಿ ಅವಾಮ್ ಮೋರ್ಚ ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿಯ ನೂತನ ಶಾಸಕರು ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಇಂದಿನ ಸಭೆಯಲ್ಲ
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಪಾಟ್ನಾ: ಬಿಹಾರ ವಿಧಾನಸಭೆಗೆ ಆಯ್ಕೆಯಾಗಿರುವ ಎನ್ ಡಿಎಯ ಹೊಸ ಶಾಸಕರು ಪಾಟ್ನಾದಲ್ಲಿ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಸೇರಲಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಜೆಡಿಯು, ಬಿಜೆಪಿ, ಹಿಂದೂಸ್ತಾನಿ ಅವಾಮ್ ಮೋರ್ಚ ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿಯ ನೂತನ ಶಾಸಕರು ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. 

ಇಂದು ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ನೂತನ 74 ಶಾಸಕರ ಸಭೆ ನಡೆಯಲಿದ್ದು ಇಂದು ಬೆಳಗ್ಗೆ ಪಾಟ್ನಾಕ್ಕೆ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಈ ಸಭೆಯ ನಂತರ ಎನ್ ಡಿಎ ಮೈತ್ರಿಕೂಟದ ಮತ್ತೊಂದು ಸಭೆ ನಡೆಯಲಿದ್ದು ಬಿಹಾರ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭ ಮತ್ತು ಸರ್ಕಾರ ರಚನೆ ಸಂಬಂಧ ಬೇರೆ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ಇಂದು ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಮುಗಿದ ನಂತರ ಪಕ್ಷದ ಶಾಸಕರೆಲ್ಲರೂ ಸಾಮೂಹಿಕವಾಗಿ ಕಾಮೇಶ್ವರ್ ಚೌಪಲ್ ಅವರು ನೂತರ ಉಪ ಮುಖ್ಯಮಂತ್ರಿಯಾಗುತ್ತಾರೆಯೇ ಅಥವಾ ಸುಶಿಲ್ ಕುಮಾರ್ ಮೋದಿಯವರನ್ನು ಮುಂದುವರಿಸುವುದೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. 

ಇಂದು ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಮುಗಿದ ನಂತರ ಪಕ್ಷದ ಶಾಸಕರೆಲ್ಲರೂ ಸಾಮೂಹಿಕವಾಗಿ ಕಾಮೇಶ್ವರ್ ಚೌಪಲ್ ಅವರು ನೂತರ ಉಪ ಮುಖ್ಯಮಂತ್ರಿಯಾಗುತ್ತಾರೆಯೇ ಅಥವಾ ಸುಶಿಲ್ ಕುಮಾರ್ ಮೋದಿಯವರನ್ನು ಮುಂದುವರಿಸುವುದೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. 

ಇಂದು ರಾಜನಾಥ್ ಸಿಂಗ್ ಅವರು ಸಭೆ ನಡೆಸಿದ ನಂತರ, ಶಾಸಕರ ಸಾಮೂಹಿಕ ಸಹಮತದ ನಂತರವಷ್ಟೇ ಬಿಹಾರದ ನೂತನ ಉಪಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇಂದು ರಾಜನಾಥ್ ಸಿಂಗ್ ಸಮ್ಮುಖದಲ್ಲಿ ನೂತನ  ಸಚಿವರು ಯಾರ್ಯಾರು ಎಂದು ತೀರ್ಮಾನವಾಗಲಿದೆ. ಜತೆಗೆ ಸಭೆಯಲ್ಲಿ ಹೊಸ ಸಂಪುಟ ರಚನೆ, ಸ್ವೀಕರ್ ಆಯ್ಕೆ ಕುರಿತಂತೆಯೂ ಚರ್ಚೆ ನಡೆಯಲಿದೆ. ಬಿಹಾರದ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಕೂಡ ಪಕ್ಷದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com