ತೆಲಂಗಾಣ: ಎರಡು ಪ್ರತ್ಯೇಕ ಘಟನೆಗಳಲ್ಲಿ ನೀರಿನಲ್ಲಿ ಮುಳುಗಿ ಆರು ಮಂದಿ ಸಾವು

ತೆಲಂಗಾಣದಲ್ಲಿ ಶನಿವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಆರು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ತೆಲಂಗಾಣದಲ್ಲಿ ಶನಿವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಆರು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೊದಲ ಘಟನೆಯಲ್ಲಿ ಇಬ್ಬರು ಯುವಕರು ನಿಜಾಮ್‍ಸಾಗರ್ ನಲ್ಲಿ ಈಜುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ. ಕಾಮಾರೆಡ್ಡಿ ಜಿಲ್ಲೆಯ ಕಲ್ಲೇರು ಮಂಡಲ ಮೂಲದ ಸುನೀರ್, ಶಿವ, ಬಲರಾಜು, ಮನ್ನನ್ ಮತ್ತು ಪ್ರಶಾಂತ್ ಎಂಬುವವರು ನಿಜಾಮ್‍ ಸಾಗರ್ ತೆರಳಿದ್ದು, ಈ ಪೈಕಿ ಶಿವ ಮತ್ತು ಮುನೀರ್ ಪ್ರಾಜೆಕ್ಟ್ ಗೇಟ್‌ಗಳ  ಸಮೀಪ ಇತರರೊಂದಿಗೆ ಈಜುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ. 

ಮೊದಲ ಘಟನೆಯಲ್ಲಿ ಇಬ್ಬರು ಯುವಕರು ಈಜುತ್ತಿದ್ದಾಗ ನಿಜಾಮಸಾಗರ್ ಡ್ಯಾಂನಲ್ಲಿ ಮುಳುಗಿದ್ದಾರೆ. ಕಾಮರೆಡ್ಡಿ ಜಿಲ್ಲೆಯ ಕಲ್ಲೇರು ಮಂಡಲ ಮೂಲದ ಸುನೀರ್, ಶಿವ, ಬಲರಾಜು, ಮನ್ನನ್ ಮತ್ತು ಪ್ರಸಾಂತ್ ಎಂಬ ಐದು ಯುವಕರು ನಿಜಾಮಸಾಗರ್ ಡ್ಯಾಂಗೆ ತೆರಳಿದ್ದರು. ಈ ಪೈಕಿ ಡ್ಯಾಂ ಗೇಟ್‌ಗಳ  ಸಮೀಪವಿರುವ ಇತರರೊಂದಿಗೆ ಈಜುತ್ತಿದ್ದಾಗ ಶಿವ ಮತ್ತು ಸುನೀರ್ ಮುಳುಗಿದ್ದರು.

ಸಂತ್ರಸ್ತ ಕುಟುಂಬ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸುನೀರ್ ಶವವನ್ನು ಹೊರತೆಗೆದಿದ್ದು, ಶಿವನ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಮುಲುಗು ಜಿಲ್ಲೆಯ ರಂಜಾ ರಾಜಪುರಂ ಮೂಲದ ವೆಂಕಟಪುರಂ ಮಂಡಲದತುಮ್ಮ ಕಾರ್ತಿಕ್, ಅನ್ವೇಶ್, ಶ್ರೀಕಾಂತ್ ಮತ್ತು ರಾಯವರಪು ಪ್ರಕಾಶ್ ಎಂಬ ನಾಲ್ಕು ಯುವಕರು ಈಜುವಾಗ ಪಥಮರಿಸಾಲಾದ ಗೋದಾವರಿ ನದಿಯಲ್ಲಿ ಮುಳುಗಿದ್ದಾರೆ. 

ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ರಾಯವರಪು ಪ್ರಕಾಶ್ ಮತ್ತು ತುಮ್ಮ ಕಾರ್ತಿಕ್ ಅವರ ಶವಗಳನ್ನು ಈಜುಗಾರರ ಸಹಾಯದಿಂದ ಹೊರತೆಗೆದರು. ಇನ್ನೂ ಎರಡು ಶವಗಳನ್ನು ಪತ್ತೆ ಹಚ್ಚಲು ಹೆಚ್ಚಿನ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com