ಬೇಹುಗಾರಿಕೆ ಆರೋಪದಲ್ಲಿ 8 ವರ್ಷಗಳಿಂದ ಪಾಕ್ ಜೈಲಿನಲ್ಲಿದ್ದ ಕಾನ್ಪುರ ನಿವಾಸಿ ಕೊನೆಗೂ ಭಾರತಕ್ಕೆ ಆಗಮನ

ಬೇಹುಗಾರಿಕೆ ಆರೋಪದಲ್ಲಿ 8 ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಕಾನ್ಪುರದ ಶಂಶುದ್ದೀನ್ ಭಾರತಕ್ಕೆ ಹಿಂದಿರುಗಿದ್ದಾರೆ.
ಶಂಶುದ್ದೀನ್
ಶಂಶುದ್ದೀನ್

ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ 8 ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಕಾನ್ಪುರದ ಶಂಶುದ್ದೀನ್ ಭಾರತಕ್ಕೆ ಹಿಂದಿರುಗಿದ್ದಾರೆ.

71 ವರ್ಷ ಪ್ರಾಯದ ಶಂಶುದ್ದೀನ್ ಎಂಟು ವರ್ಷಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಕಾನ್ಪುರದ ತಮ್ಮ ಮನೆಗೆ ಅವರು ಮರಳಿದ್ದಾರೆ.

ಶಂಶುದ್ದೀನ್ ತಮ್ಮ ದುಃಖತಪ್ತ ಹೆಣ್ಣುಮಕ್ಕಳನ್ನು ಹಾಗೂ ತಮ್ಮ 70 ವರ್ಷದ ಸಹೋದರಿಯನ್ನು ಆಲಿಂಗಿಸಿದರು. ಅವರು ವಾಸಿಸುತ್ತಿದ್ದ ಇಡೀ ಪ್ರದೇಶದಲ್ಲಿ ದೀಪಾವಳಿಯ ಮಾದರಿಯ ಸಂಭ್ರಮ ಮನೆಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com