ಬಿಹಾರದಲ್ಲಿ ಡಿಸಿಎಂ ಸ್ಥಾನಕ್ಕೆ ಪೈಪೋಟಿ; ಎರಡೆರಡು ಡಿಸಿಎಂ ಹುದ್ದೆ ಸೃಷ್ಟಿ, ರೇಣುದೇವಿ, ತಾರ್ಕಿಶೋರ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆ!

ಬಿಹಾರದಲ್ಲಿ ಸರ್ಕಾರ ರಚನೆ ಕಸರತ್ತು ಗರಿಗೆದರಿದ್ದು, ಈಗಾಗಲೇ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಪರಿಣಾಮ ಕರ್ನಾಟಕದಂತೆಯೇ ಬಿಹಾರದಲ್ಲೂ ಎರಡೆರಡು ಡಿಸಿಎಂ ಹುದ್ದೆ ಸೃಷ್ಟಿಸಲಾಗಿದ್ದು, ರೇಣುದೇವಿ, ತಾರ್ಕಿಶೋರ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆಸ ಎಂದು ಹೇಳಲಾಗಿದೆ.
ನಿತೀಶ್-ಮೋದಿ
ನಿತೀಶ್-ಮೋದಿ

ಪಾಟ್ನಾ: ಬಿಹಾರದಲ್ಲಿ ಸರ್ಕಾರ ರಚನೆ ಕಸರತ್ತು ಗರಿಗೆದರಿದ್ದು, ಈಗಾಗಲೇ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಪರಿಣಾಮ ಕರ್ನಾಟಕದಂತೆಯೇ ಬಿಹಾರದಲ್ಲೂ ಎರಡೆರಡು ಡಿಸಿಎಂ ಹುದ್ದೆ ಸೃಷ್ಟಿಸಲಾಗಿದ್ದು, ರೇಣುದೇವಿ, ತಾರ್ಕಿಶೋರ್ ಪ್ರಸಾದ್ ಆಯ್ಕೆಯಾಗುವ ಸಾಧ್ಯತೆಸ ಎಂದು ಹೇಳಲಾಗಿದೆ.

ಆ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, 'ಮುಖ್ಯಮಂತ್ರಿಯಾಗಿ ಚುನಾಯಿತರಾದ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಹೊಸ ಸಂಪುಟವು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರ ಮಿತ್ರಪಕ್ಷ  ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾನುವಾರ  ಕತಿಹಾರ್ ಶಾಸಕ ತಾರ್ಕಿಶೋರ್ ಪ್ರಸಾದ್ ಮತ್ತು ಬೆಟ್ಟಯ್ಯ ಶಾಸಕ ರೇಣು ದೇವಿ ಅವರ ಶಾಸಕಾಂಗ ಪಕ್ಷದ ಕ್ರಮವಾಗಿ ನಾಯಕ ಮತ್ತು ಉಪನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಬಿಜೆಪಿಯಿಂದ ಇಬ್ಬರು ಉಪಮುಖ್ಯಮಂತ್ರಿಗಳು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಹಾರದ ಹಿರಿಯ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಅವರು ಜುಲೈ 2017 ರಿಂದ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಈಗ ಅವರು ಕೇಂದ್ರ ಸಚಿವ ಸಂಪುಟಕ್ಕೆ ಆಯ್ಕೆಯಾಗುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಬಿಹಾರದಲ್ಲಿ ಎರಡೆರಡು ಡಿಸಿಎಂ ಹುದ್ದೆ  ಸೃಷ್ಟಿಸಲಾಗಿದೆ ಎಂದು ಹೇಳಲಾಗಿದೆ. 

ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ  ಆರ್ಜೆಡಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೆ, ಎರಡನೇ ಸ್ಥಾನದಲ್ಲಿ ಬಿಜೆಪಿ ಹಾಗೂ ಮೂರನೇ ಸ್ಥಾನಕ್ಕೆ ಜೆಡಿಯು ತೃಪ್ತಿಪಟ್ಟುಕೊಂಡಿತ್ತು. ಒಟ್ಟಾರೆ ಎನ್ದಿಎ 125 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದ ಗೆರೆಯನ್ನು ದಾಟಿತ್ತು. ಈಗ ನಿತೀಶ್  ಕುಮಾರ್ ಅವರು ಎನ್ದಿಎ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com