ಮಹಾರಾಷ್ಟ್ರ: ಆ್ಯಸಿಡ್ ದಾಳಿಯಿಂದ ಮಹಿಳೆ ಸಾವು, ಗೆಳೆಯನ ಬಂಧಿಸಿದ ಪೊಲೀಸರು 

ಗೆಳತಿಯ ಮೇಲೆ ಆಸಿಡ್ ಎರಚಿ, ಜೀವಂತವಾಗಿ ಸುಡಲು ಯತ್ನಿಸಿದ ಧಾರುಣ ಘಟನೆ ಮಹಾರಾಷ್ಟ್ಟದಲ್ಲಿ ವರದಿಯಾಗಿದ್ದು, ಈ ಸಂಬಂಧ ಯುವಕೋನೋರ್ವನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಆ್ಯಸಿಡ್ ದಾಳಿ
ಆ್ಯಸಿಡ್ ದಾಳಿ

ಮುಂಬೈ: ಗೆಳತಿಯ ಮೇಲೆ ಆಸಿಡ್ ಎರಚಿ, ಜೀವಂತವಾಗಿ ಸುಡಲು ಯತ್ನಿಸಿದ ಧಾರುಣ ಘಟನೆ ಮಹಾರಾಷ್ಟ್ಟದಲ್ಲಿ ವರದಿಯಾಗಿದ್ದು, ಈ ಸಂಬಂಧ ಯುವಕೋನೋರ್ವನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿಯನ್ನು 25 ವರ್ಷದ ಅವಿನಾಶ್ ರಜುರೆ ಎಂದು ಗುರುತಿಸಲಾಗಿದೆ. ಮಹಿಳೆ ನಾಂದೇಡ್‍ನ ಶೆಲಗಾಂವ್ ಮೂಲದವಳಾಗಿದ್ದು, ಗೆಳೆಯನೊಂದಿಗೆ ಪುಣೆಯಿಂದ ತನ್ನ ಊರಿಗೆ ಹೊರಟಿದ್ದಳು. ದಾರಿ ಮಧ್ಯೆ ಯಲಂಬ್ ಘಾಟ್‍ನ ನಿರ್ಜನ  ಪ್ರದೇಶದಲ್ಲಿ ಇಬ್ಬರೂ ತಂಗಿದ್ದು, ಈ ವೇಳೆ ಮಹಿಳೆಯ ಗೆಳೆಯ ಇದ್ದಕ್ಕಿದ್ದಂತೆ ಅವಳ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ್ದಾನೆ ಎಂದು ನೆಕ್ನೂರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಗೆಳತಿ ಮೇಲೆ ಆಸಿಡ್ ಸುರಿದು, ಬೆಂಕಿ ಹಚ್ಚುತ್ತಿದ್ದಂತೆ ಗೆಳೆಯ ಅವಿನಾಶ್ ಪರಾರಿಯಾಗಿದ್ದಾನೆ. ದಾರಿ ಹೋಕರು ಇದನ್ನು ನೋಡಿ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾಳೆ. ಪೊಲೀಸರು ಸಂತ್ರಸ್ತೆಯ ವಯಸ್ಸನ್ನು ಸಹ ಬಹಿರಂಗಪಡಿಸಿಲ್ಲ. ಬೆಳಗಿನ ಜಾವ 3  ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದು, ಮಧ್ಯಾಹ್ನದ ಬಳಿಕ ಪೊಲೀಸರಿಗೆ ವಿಷಯ ತಿಳಿದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಶನಿವಾರ ನಾವು ಮಹಿಳೆಯ ಹೇಳಿಕೆ ಪಡೆದಿದ್ದು, ಯಾಕೆ ಆರೋಪಿ ದಾಳಿ ಮಾಡಿದ ಎಂಬ ಕುರಿತು ಮಹಿಳೆ ತಿಳಿಸಿಲ್ಲ. ಬಳಿಕ ಅವಳು ಸಾವನ್ನಪ್ಪಿದಳು. ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸ್ ತಂಡ ಆಸ್ಪತ್ರೆಗೆ ತೆರಳಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಿದೆ. ಘಟನೆ ಬಗ್ಗೆ ನಾಂದೇಡ್ ಪೊಲೀಸರು ಎಚ್ಚರ  ವಹಿಸಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ತಂಡವನ್ನು ರಚಿಸಿದ್ದಾರೆ. ಅಲ್ಲದೆ ಐಪಿಸಿ ಸೆಕ್ಷನ್ 326ಎ (ಆಸಿಡ್ ಸೇರಿದಂತೆ ಇತರೆ ವಸ್ತುಗಳಿಂದ ದಾಳಿ) ಹಾಗೂ 307(ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿದೆ. ಪರಾರಿಯಾಗಿರುವ ಆರೋಪಿ ಅವಿನಾಶ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com