ಎರಡನೇ ಪರೀಕ್ಷೆಯಲ್ಲೂ ಯಶಸ್ವಿಯಾದ ಕ್ಯೂಆರ್‌ಎಸ್‌ಎಎಂ ಕ್ಷಿಪಣಿ, ಶತ್ರುದೇಶಗಳ ಎದೆಯಲ್ಲಿ ನಡುಕ!

ಸ್ವದೇಶಿ ನಿರ್ಮಿತ ತ್ವರಿತ ಪ್ರತಿಕ್ರಿಯೆಯ ನೆಲದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ(ಕ್ಯೂಆರ್‌ಎಸ್‌ಎಎಂ)ಯ ನಿರ್ಣಾಯಕ ಅಭಿವೃದ್ಧಿ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ.
ಕ್ಷಿಪಣಿ
ಕ್ಷಿಪಣಿ

ಭುವನೇಶ್ವರ್: ಸ್ವದೇಶಿ ನಿರ್ಮಿತ ತ್ವರಿತ ಪ್ರತಿಕ್ರಿಯೆಯ ನೆಲದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿ(ಕ್ಯೂಆರ್‌ಎಸ್‌ಎಎಂ)ಯ ನಿರ್ಣಾಯಕ ಅಭಿವೃದ್ಧಿ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕ್ಷಿಪಣಿಯನ್ನು ಮೊದಲ ಬಾರಿಗೆ ಸಜೀವ ಸಿಡಿತಲೆ ಬಳಸಿ ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಪರೀಕ್ಷಿಸಲಾಯಿತು. ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಕ್ಷಿಪಣಿ ಮಾನವರಹಿತ ಡ್ರೋನ್ ಗುರಿಯನ್ನು ನಿಖರವಾಗಿ ನಾಶಪಡಿಸಿತು.

ರಾಡಾರ್‌ಗಳು ಗುರಿಯನ್ನು ದೀರ್ಘ ವ್ಯಾಪ್ತಿಯಿಂದ ಪತ್ತೆ ಹಚ್ಚಿ ಮಿಷನ್ ಕಂಪ್ಯೂಟರ್ ಸ್ವಯಂಚಾಲಿತವಾಗಿ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ರಾಡಾರ್ ಡೇಟಾ ಲಿಂಕ್ ಮೂಲಕ ನಿರಂತರ ಮಾರ್ಗದರ್ಶನ ನೀಡಲಾಯಿತು. ಇದು ಚಲಿಸುವ ಶತ್ರು ವಿಮಾನ ಅಥವಾ ಗುರಿಯನ್ನು ಪತ್ತೆ ಹಚ್ಚಿ, ಹೊಡೆದುರುಳಿಸುವ ಸಲುವಾಗಿ ಕ್ಯೂಆರ್‌ಎಸ್‌ಎಎಂ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗಿದೆ. 

ಕಳೆದ ಐದು ದಿನಗಳಲ್ಲಿ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್)ನಿಂದ ಕ್ಷಿಪಣಿಯ ಎರಡನೇ ಪ್ರಯೋಗ ಇದಾಗಿದೆ. ನವೆಂಬರ್ 13 ರಂದು ಹೆಚ್ಚಿನ ವೇಗದಲ್ಲಿ ಚಲಿಸುವ ಕ್ಷಿಪಣಿ ಮಧ್ಯಮ ವ್ಯಾಪ್ತಿಯಲ್ಲಿ ಮತ್ತು ಮಧ್ಯಮ ಎತ್ತರದಲ್ಲಿ ಪೈಲಟ್‌ಲೆಸ್ ಟಾರ್ಗೆಟ್ ವಿಮಾನವನ್ನು ಆಕಾಶ ಮಧ್ಯೆ ಹೊಡೆದುರುಳಿಸಿತ್ತು. ಭಾರತೀಯ ಸೇನಾಧಿಕಾರಿಗಳ ಸಮ್ಮುಖದಲ್ಲಿ ಪರೀಕ್ಷೆ ನಡೆಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com