ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ? ಕಪಿಲ್ ಸಿಬಲ್ ವಿರುದ್ಧ ಅಶೋಕ್ ಗೆಹ್ಲೋಟ್ ವಾಗ್ದಾಳಿ

ಪಕ್ಷದ ನಾಯಕತ್ವವನ್ನು ಪ್ರಶ್ನಿಸಿರುವ  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಪಿಲ್ ಸಿಬಲ್ ಗೆ ಟ್ವೀಟ್ ಮೂಲಕ ಗೆಹ್ಲೋಟ್ ಪ್ರತಿಕ್ರಿಯಿಸಿದ್ದಾರೆ.
ಅಶೋಕ್ ಗೆಹ್ಲೋಟ್, ಕಪಿಲ್ ಸಿಬಲ್
ಅಶೋಕ್ ಗೆಹ್ಲೋಟ್, ಕಪಿಲ್ ಸಿಬಲ್

ನವದೆಹಲಿ: ಪಕ್ಷದ ನಾಯಕತ್ವವನ್ನು ಪ್ರಶ್ನಿಸಿರುವ  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಪಿಲ್ ಸಿಬಲ್ ಗೆ  ಟ್ವೀಟ್ ಮೂಲಕ ಗೆಹ್ಲೋಟ್ ಪ್ರತಿಕ್ರಿಯಿಸಿದ್ದಾರೆ.

ಪಕ್ಷದಲ್ಲಿನ ಸುಧಾಕರಣೆ ಕುರಿತಂತೆ ಪತ್ರ ಬರೆದ 23 ನಾಯಕರಲ್ಲಿ ಕಪಿಲ್ ಸಿಬಲ್  ಕೂಡಾ ಒಬ್ಬರಾಗಿದ್ದಾರೆ. ಪಕ್ಷದ ವಿಚಾರಗಳ ಕುರಿತು ಚರ್ಚಿಸಲು ಅಗತ್ಯವಾದ ವೇದಿಕೆಯ ಕೊರತೆಯಿಂದಾಗಿ ಒತ್ತಾಯದಿಂದ  ಸಾರ್ವಜನಿಕವಾಗಿ ಮಾತನಾಡಿರುವುದಾಗಿ ಸಿಬಲ್ ವಾದಿಸಿದ್ದರು. ಅಲ್ಲದೇ,  ಚುನಾವಣೆ ನಿರ್ವಹಣೆಗಾಗಿ ದಕ್ಷ , ಹಿರಿಯ ನಾಯಕರ ಅಗತ್ಯವಿದೆ. ಪಕ್ಷಕ್ಕೆ ಚಿಂತನಾಶೀಲ ನಾಯಕತ್ವ ಬೇಕು ಎಂದು ಹೇಳಿಕೆ ನೀಡಿದ್ದರು.

 ಕಿಪಿಲ್ ಸಿಬಲ್ ಅವರ ಹೆಚ್ಚಿನ ಸಾರ್ವಜನಿಕ ನಿಲುವು 'ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಘಾಸಿಗೊಳಿಸಿದೆ' ಮತ್ತು ಕಾಂಗ್ರೆಸ್ ಯಾವಾಗಲೂ ಯಾವುದೇ ಬಿಕ್ಕಟ್ಟಿನಿಂದ ಮೇಲೇರಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. 

ಬಿಹಾರ ಚುನಾವಣೆ ಹಾಗೂ ವಿವಿಧ ರಾಜ್ಯಗಳ ಉಪ ಚುನಾವಣೆಯಲ್ಲಿನ  ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಹೇಳಿಕೆ ನೀಡಿದ್ದರು. ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲು ಚಿಂತನಾಶೀಲ ಸಮರ್ಥ ನಾಯಕತ್ವದ ಅಗತ್ಯವಿದೆ ಎಂದು ಒತ್ತಾಯಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com