ಹೆಚ್ಚಿನ ಪ್ರಮಾಣದಲ್ಲಿ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಸೂಕ್ತವಲ್ಲ: ಐಸಿಎಂಆರ್ 

ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿರದ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರೆಪಿ ಸೂಕ್ತವಲ್ಲ ಎಂದು ಐಸಿಎಂ ಆರ್ ಸಲಹೆ ನೀಡಿದೆ. 
ಪ್ಲಾಸ್ಮಾ
ಪ್ಲಾಸ್ಮಾ

ನವದೆಹಲಿ: ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿರದ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರೆಪಿ ಸೂಕ್ತವಲ್ಲ ಎಂದು ಐಸಿಎಂ ಆರ್ ಸಲಹೆ ನೀಡಿದೆ. 

ಪ್ಲಾಸ್ಮಾ ಥೆರೆಪಿಯೆಡೆಗೆ ಎಸ್ಒಪಿಯನ್ನು ಬಿಡುಗಡೆ ಮಾಡಿರುವ ಐಸಿಎಂಆರ್ ಈ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಮಾ ಥೆರೆಪಿ ಮೊರೆ ಹೋಗುವುದು ಬೇಡ ಎಂದು ಹೇಳಿದೆ.

ಕನ್ವೆಲೆಸೆಂಟ್ ಪ್ಲಾಸ್ಮಾ ಕುರಿತಂತೆ ದೇಶದ 39 ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಟ್ರಯಲ್ ಗಳನ್ನು ಐಸಿಎಂ ಆರ್ ನಡೆಸಿದ್ದು, ಸಿಪಿಟಿಯಿಂದಾಗಿ ಕೋವಿಡ್-19 ಮರಣ ಪ್ರಮಾಣ ಸುಧಾರಣೆ ಕಾಣದೇ ಇರುವುದನ್ನು ಗಮನಿಸಿದ್ದು ಈ ಆದೇಶ ಹೊರಡಿಸಿದೆ.

ಇದೇ ಮಾದರಿಯ ಅಧ್ಯಯನಗಳು ಚೀನಾ ಹಾಗೂ ನೆದರ್ಲ್ಯಾಂಡ್ ಗಳಲ್ಲಿ ನಡೆದಿದ್ದು, ಮಹತ್ವದ ಸಂಗತಿಗಳು ಕಂಡುಬಂದಿಲ್ಲ ಆದ್ದರಿಂದ ಸಿಪಿಟಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದು ಸೂಕ್ತವಲ್ಲ ಎಂದು ಐಸಿಎಂಆರ್ ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com