ವಿದ್ಯುತ್‌, ನೀರು, ಹೀಟರ್‌ಗಳಿರುವ ವಿಶೇಷ ಟೆಂಟ್‌; ಲಡಾಖ್ ನಲ್ಲಿ ಯೋಧರಿಗೆ ಅತ್ಯಾಧುನಿಕ ಸ್ಮಾರ್ಟ್‌ ಕ್ಯಾಂಪ್ 

ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಸಮೀಪ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರಿಗಾಗಿ ಅತ್ಯಾಧುನಿಕ ಸ್ಮಾರ್ಟ್‌ ಕ್ಯಾಂಪ್ ಸಿದ್ಧಪಡಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲೇಹ್‌: ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಸಮೀಪ ಪೂರ್ವ ಲಡಾಖ್‌ನಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರಿಗಾಗಿ ಅತ್ಯಾಧುನಿಕ ಸ್ಮಾರ್ಟ್‌ ಕ್ಯಾಂಪ್ ಸಿದ್ಧಪಡಿಸಲಾಗುತ್ತಿದೆ.

ಚೀನಾ ಮತ್ತು ಭಾರತ ನಡುವಿನ ಗಡಿ ಶೀಥಲ ಸಮರ ಮುಂದುವರೆದಿರುವಂತೆಯೇ ಇತ್ತ ಭಾರತ ತನ್ನ ಗಡಿ ಪ್ರದೇಶ ಲಡಾಖ್ ನಲ್ಲಿ ತೀವ್ರ ಚಳಿಯ ಹೊರತಾಗಿಯೂ ಸೈನಿಕ ಭದ್ರತೆಯನ್ನು ಗಟ್ಟಿಗೊಳಿಸಿದೆ. ಚಳಿಗಾಲದಲ್ಲಿ ಗಡಿಕಾಯುವ ಸೈನಿಕರ ಸುರಕ್ಷತೆಗಾಗಿ ಭಾರತೀಯ ಸೇನೆ  ಅತ್ಯಾಧುನಿಕ ಸ್ಮಾರ್ಟ್‌ ಕ್ಯಾಂಪ್ ಗಳನ್ನು ಸಿದ್ಧಪಡಿಸಿದೆ. ಟೆಂಟ್ ಗಳಲ್ಲಿ ಹೀಟರ್‌ಗಳನ್ನು ಅಳವಡಿಸಲಾಗಿದ್ದು, ಈ ವಿಶೇಷ ಟೆಂಟ್ ಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕೂಡ ಇರಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸೇನೆ ಅತ್ಯಾಧುನಿಕ ಶಿಬಿರಗಳ ನಿರ್ಮಾಣವನ್ನು  ಪೂರ್ಣಗೊಳಿಸಿದೆ. 

ಲಡಾಖ್ ನಲ್ಲಿ ಚಳಿಗಾಲದಲ್ಲಿ ತಾಪಮಾನ -40 ಡಿಗ್ರಿ ಸೆಲ್ಸಿಯಸ್‌ ಗೆ ಕುಸಿಯಲಿದೆ, ಹೀಗಾಗಿ ಇಂತಹ ಕಠಿಣ ಚಳಿಯ ನಡುವೆಯೇ ಸೈನಿಕರು ಕರ್ತವ್ಯ ನಿರ್ವಹಿಸಬೇಕಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸೇನಾಧಿಕಾರಿಗಳು, 'ಮುಂಬರುವ ಕಠಿಣ ಚಳಿಗಾಲದಲ್ಲೂ ಸೇನಾಪಡೆಯು  ಸಮರ್ಪಕವಾದ ಕಾರ್ಯಾಚರಣೆ ಸಾಮರ್ಥ್ಯವನ್ನು ಹೊಂದಿರಬೇಕು ಎನ್ನುವ ಉದ್ದೇಶದೊಂದಿಗೆ ಈ ಶಿಬಿರಗಳನ್ನು ನಿರ್ಮಿಸಲಾಗಿದೆ. ಕಳೆದ ಕೆಲ ವರ್ಷದಿಂದ ಈ ಭಾಗದಲ್ಲಿ ಸ್ಮಾರ್ಟ್‌ ಕ್ಯಾಂಪ್‌ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ವಿದ್ಯುತ್‌ ಸಂಪರ್ಕ, ನೀರಿನ ವ್ಯವಸ್ಥೆ, ಮೈಕೊರೆಯುವ  ಚಳಿಯನ್ನು ತಡೆಯಲು ಹೀಟರ್‌ಗಳ ವ್ಯವಸ್ಥೆ, ಆರೋಗ್ಯಕರ ವಾತಾವರಣ ಹಾಗೂ ಸ್ವಚ್ಛತೆಗೆ ಒತ್ತು ನೀಡಿರುವ ಹೊಸ ಶಿಬಿರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

'ಎಲ್‌ಎಸಿಯ ಮುಂಚೂಣಿಯಲ್ಲಿರುವ ಯೋಧರಿಗೆ 'ಹೀಟೆಡ್‌ ಟೆಂಟ್ಸ್‌'ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.  ಚಳಿಗಾಲದಲ್ಲಿ ಈ ಭಾಗದಲ್ಲಿ ತಾಪಮಾನ ಮೈನಸ್ 30 ಡಿಗ್ರಿಯಿಂದ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ವರೆಗೂ ಕುಸಿಯುತ್ತದೆ. ಕೆಲವೊಮ್ಮೆ 40 ಅಡಿ ಹಿಮಪಾತವೂ  ಸಂಭವಿಸುತ್ತದೆ. ಜೊತೆಗೆ ಈ ಪ್ರದೇಶವನ್ನು ಸಂಪರ್ಕಿಸುವ ರಸ್ತೆಗಳೂ ಮುಚ್ಚಲ್ಪಡುತ್ತವೆ. ಹೀಗಾಗಿ ಈ ವಲಯದಲ್ಲಿರುವ ಯೋಧರಿಗೆ ಸೂಕ್ತ ಸೌಲಭ್ಯವಿರುವ ವಸತಿ ಸೌಲಭ್ಯವನ್ನು ನಿರ್ಮಿಸಲಾಗಿದೆ' ಎಂದು ಸೇನಾಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com