ನಿದ್ರೆ ಮಾತ್ರೆ ಸೇವಿಸಿ ಡಿಎಂಕೆ ಶಾಸಕಿ ಅರುಣಾ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು

ತಮಿಳುನಾಡಿನ ಆಲಂಗುಲಂ ಶಾಸಕಿ ಪೂಂಗೋತೈ ಅಲ್ಲಡಿ ಅರುಣಾ ಅವರು ಗುರುವಾರ ನಿದ್ರೆ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

Published: 19th November 2020 04:02 PM  |   Last Updated: 19th November 2020 04:25 PM   |  A+A-


dmk-aruna

ಶಾಸಕಿ ಅರುಣಾ

Posted By : Lingaraj Badiger
Source : The New Indian Express

ತೆಂಕಸಿ: ತಮಿಳುನಾಡಿನ ಆಲಂಗುಲಂ ಶಾಸಕಿ ಪೂಂಗೋತೈ ಅಲ್ಲಡಿ ಅರುಣಾ ಅವರು ಗುರುವಾರ ನಿದ್ರೆ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಅಧಿಕ ಪ್ರಮಾಣದಲ್ಲಿ ನಿದ್ರೆ ಮಾತ್ರೆ ಸೇವಿಸಿ ಮಲಗಿದ್ದ ಅರುಣಾ ಅವರು, ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳದೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಅವರನ್ನು ತಿರುನೆಲ್ವೇಲಿಯ ಶಿಪಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಅರುಣಾ ಅವರು ಪಕ್ಷದ ಆಂತರಿಕ ವಿಚಾರಗಳಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಸಂಜೆ ಕಡಾಯಂನಲ್ಲಿ ನಡೆದ ಬೂತ್ ಸಮಿತಿ ಸಭೆಯಲ್ಲಿ, ಶಾಸಕಿಯನ್ನು ಕಡಾಯಂ ಕೇಂದ್ರ ಕಾರ್ಯದರ್ಶಿ ಕುಮಾರ್ ಅವರ ಬೆಂಬಲಿಗರು ನಿಂದಿಸಿದ್ದಾರೆ ಎನ್ನಲಾಗಿದೆ. ಪೂಂಗೋತೈ ಅವರು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಗೌರವಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

ವಾಗ್ವಾದದ ನಂತರ, ಕೆಲವು ಕಾರ್ಯಕರ್ತರು ಶಾಸಕಿ ಅರುಣಾ ಅವರ ವಿರುದ್ಧ ಧ್ವನಿ ಎತ್ತಿದ ನಂತರ ಅವರು ಸಭೆಯ ಮಧ್ಯದಲ್ಲಿಯೇ ಎದ್ದುಹೋದರು ಎನ್ನಲಾಗಿದೆ. ಆದರೆ ಈ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp