ಆರೋಗ್ಯ ಸೇವೆ ಕಾರ್ಯಕರ್ತರು, 65 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ನೀಡಿಕೆಯಲ್ಲಿ ಆದ್ಯತೆ: ಸಚಿವ ಹರ್ಷವರ್ಧನ್

ಕೋವಿಡ್-19 ಲಸಿಕೆ ಲಭ್ಯವಾದಾಗ ಆದ್ಯತೆಯ ಆಧಾರದಲ್ಲಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. 
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)

ನವದೆಹಲಿ: ಕೋವಿಡ್-19 ಲಸಿಕೆ ಲಭ್ಯವಾದಾಗ ಆದ್ಯತೆಯ ಆಧಾರದಲ್ಲಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. 

ಎಫ್ಐಸಿಸಿಐ ಎಫ್ಎಲ್ಒಯಿಂದ ಆಯೋಜನೆಗೊಂಡ ವೆಬಿನಾರ್ ನಲ್ಲಿ ಮಾತನಾಡಿರುವ ಡಾ. ಹರ್ಷವರ್ಧನ್, ಮುಂದಿನ ಕೆಲವು ತಿಂಗಳುಗಳಲ್ಲಿ ಕೋವಿಡ್-19 ಲಸಿಕೆ ಲಭ್ಯವಾಗಲಿದೆ. ಜುಲೈ- ಆಗಸ್ಟ್ ನಲ್ಲಿ 400-500 ಮಿಲಿಯನ್ ಲಸಿಕೆಗಳು 25-30 ಕೋಟಿ ಜನರಿಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆದ್ಯತೆಯ ಆಧಾರದಲ್ಲಿ ಕೋವಿಡ್-19 ಲಸಿಕೆಯನ್ನು ಹಂಚುವುದು ಸ್ವಾಭಾವಿಕ. ಕೊರೋನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 65 ವಯಸ್ಸಿನವರಿಗೆ ಲಸಿಕೆಗಳನ್ನು ಮೊದಲು ವಿತರಿಸಲಾಗುವುದು ಆ ನಂತರ 50-65 ವಯಸ್ಸಿನವರನ್ನು ಆದ್ಯತೆಯ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

50 ವರ್ಷ ವಯಸ್ಸಿಗಿಂತ ಕಡಿಮೆ ಇದ್ದು, ಈಗಾಗಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಬಗ್ಗೆ ತಜ್ಞರು ನಿರ್ಧರಿಸಲಿದ್ದಾರೆ, ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸ್ಪಷ್ಟ ಯೋಜನೆ ರೂಪಿಸಲಾಗಿರುವುದನ್ನು ಹರ್ಷವರ್ಧನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com