ರಾಮ ಮಂದಿರಕ್ಕೆ ವನ್ಯಜೀವಿ ಅಭಯಾರಣ್ಯದಲ್ಲಿ ಮರಳುಗಲ್ಲಿನ ಕಾನೂನುಬದ್ಧ ಗಣಿಗಾರಿಕೆಗೆ ರಾಜಸ್ಥಾನ ಅವಕಾಶ!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಗುಲಾಬಿ ಬಣ್ಣದ ಕಲ್ಲುಗಳ ಗಣಿಗಾರಿಕೆಗೆ ರಾಜಸ್ತಾನ ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ ನೀಡಿದೆ.
ರಾಮ ಮಂದಿರ
ರಾಮ ಮಂದಿರ

ಜೈಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಗುಲಾಬಿ ಬಣ್ಣದ ಕಲ್ಲುಗಳ ಗಣಿಗಾರಿಕೆಗೆ ರಾಜಸ್ತಾನ ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ ನೀಡಿದೆ. 

ಗಣಿಗಾರಿಕೆಗೆ ಅನುವು ಮಾಡಿಕೊಡಲು ರಾಜಸ್ಥಾನದ ಭಾರತ್‌ಪುರದ ಜಿಲ್ಲಾಡಳಿತವು ವನ್ಯಜೀವಿ ಅಭಯಾರಣ್ಯದ ಒಂದು ಭಾಗವನ್ನು ಗುರುತಿಸಿದೆ. ಭರತ್‌ಪುರದ ಬನ್ಸಿ ಪಹಾರ್‌ಪುರದಲ್ಲಿ ಗಣಿಗಾರಿಕೆ ಮಾಡುವ ಸಾವಿರಾರು ಟನ್‌ಗಳಷ್ಟು ಗುಲಾಬಿ ಮರಳುಗಲ್ಲು ದೇವಾಲಯ ನಿರ್ಮಾಣಕ್ಕೆ ಅಗತ್ಯವಾಗಿದೆ. 

ಈ ಹಿಂದೆ ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರು ಈ 'ತಾಂತ್ರಿಕ ಸಮಸ್ಯೆ' ತೋರಿಸಿ ರಾಜಸ್ತಾನ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ರಾಜಸ್ತಾನ ಸರ್ಕಾರ ನಿರಾಕರಿಸಿತು.

ಭರತ್‌ಪುರ ಜಿಲ್ಲೆಯ ಬನ್ಸಿ ಪಹಾರ್‌ಪುರದಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಇದನ್ನು ನಿವಾರಿಸಲು ರಾಜಸ್ಥಾನ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ವಿಎಚ್‌ಪಿ ಹಿರಿಯ ಮುಖಂಡ ತ್ರಿಲೋಕಿ ನಾಥ್ ಪಾಂಡೆ ತಿಳಿಸಿದ್ದಾರೆ.

ದೇವಾಲಯದ ಯೋಜನೆಗೆ ಸಂಬಂಧಿಸಿದ ವಾಸ್ತುಶಿಲ್ಪಿ ಅನುಭಾಯಿ ಸೋಮಪುರ, ಈಗಾಗಲೇ ಒಂದು ಲಕ್ಷ ಘನ ಅಡಿ ಕಲ್ಲುಗಳನ್ನು ದಾಸ್ತಾನು ಮಾಡಲಾಗಿದೆ, ಇನ್ನೂ ಎರಡು ಲಕ್ಷ ಘನ ಅಡಿ ಅಗತ್ಯವಿದೆ ಎಂದು ಪಾಂಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com