'ಲಡಾಕ್ ಚೀನಾದಲ್ಲಿದೆ' ಎಂದು ತೋರಿಸಿದ ಟ್ವಿಟ್ಟರ್: ಕ್ಷಮೆಯಾಚನೆ, ಸರಿಪಡಿಸುವುದಾಗಿ ಅಫಿಡವಿಟ್ಟು ಸಲ್ಲಿಕೆ 

ಭಾರತ-ಚೀನಾ ಗಡಿಯ ಘರ್ಷಣೆಪೀಡಿತ ಲಡಾಕ್ ಪ್ರದೇಶ ಚೀನಾದಲ್ಲಿದೆ ಎಂದು ತೋರಿಸಿ ವಿವಾದ ಸೃಷ್ಟಿಸಿಕೊಂಡಿದ್ದ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟ್ಟರ್ ಕ್ಷಮೆ ಕೋರಿದೆ. 
ಟ್ವಿಟ್ಟರ್
ಟ್ವಿಟ್ಟರ್

ನವದೆಹಲಿ: ಭಾರತ-ಚೀನಾ ಗಡಿಯ ಘರ್ಷಣೆಪೀಡಿತ ಲಡಾಕ್ ಪ್ರದೇಶ ಚೀನಾದಲ್ಲಿದೆ ಎಂದು ತೋರಿಸಿ ವಿವಾದ ಸೃಷ್ಟಿಸಿಕೊಂಡಿದ್ದ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟ್ಟರ್ ಕ್ಷಮೆ ಕೋರಿದೆ. 

ಈ ಸಂಬಂಧ ಸಂಸದೀಯ ಸಮಿತಿಯೊಂದಕ್ಕೆ ಪತ್ರ ಬರೆದಿರುವ ಟ್ವಿಟ್ಟರ್ ಈ ತಿಂಗಳೊಳಗೆ ಆಗಿರುವ ಪ್ರಮಾದವನ್ನು ಸರಿಪಡಿಸುವುದಾಗಿ ಹೇಳಿದೆ ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.

ಟ್ವಿಟ್ಟರ್ ಈ ಸಂಬಂಧ ಕಂಪೆನಿಯ ಮುಖ್ಯ ಖಾಸಗಿ ಅಧಿಕಾರಿ ಡೇಮಿಯನ್ ಕರಿಯನ್ ಸಹಿ ಮಾಡಿರುವ ಅಫಿಡವಿಟ್ಟನ್ನು ಸಮಿತಿಗೆ ಸಲ್ಲಿಸಿದ್ದು ಭಾರತದ ಭೂಪಟವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಒಪ್ಪಿಕೊಂಡಿದೆ ಎಂದು ಮೀನಾಕ್ಷಿ ಲೇಖಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಲಡಾಕ್ ಚೀನಾಕ್ಕೆ ಸೇರಿದ್ದು ಎಂದು ತೋರಿಸಿರುವ ಟ್ವಿಟ್ಟರ್ ವಿರುದ್ಧ ಕಳೆದ ತಿಂಗಳು ಅಂಕಿಅಂಶ ರಕ್ಷಣೆ ಸಮೂದೆಯ ಜಂಟಿ ಸಂಸದೀಯ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ದೇಶದ್ರೋಹಕ್ಕೆ ಕಾರಣವಾಗಿದ್ದು, ಅಮೆರಿಕ ಮೂಲದ ಟ್ವಿಟ್ಟರ್ ಸಂಸ್ಥೆಯಲ್ಲಿ ಅಫಿಡವಿಟ್ಟು ರೂಪದಲ್ಲಿ ಭಾರತ ಸರ್ಕಾರ ವಿವರಣೆಯನ್ನು ಕೋರಿತ್ತು.

ಈ ಹಿನ್ನೆಲೆಯಲ್ಲಿ ಸಂಸದೀಯ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಅವರ ಮುಂದೆ ಹಾಜರಾದ ಟ್ವಿಟ್ಟರ್ ಭಾರತದ ಪ್ರತಿನಿಧಿಗಳು, ಬರಹ ರೂಪದಲ್ಲಿ ಕ್ಷಮೆ ಕೋರಿದ್ದು ಮಾತ್ರವಲ್ಲದೆ ಅಫಿಡವಿಟ್ಟು ರೂಪದಲ್ಲಿ ಆಗಿರುವ ತಪ್ಪನ್ನು ನವೆಂಬರ್ 30ರೊಳಗೆ ಸರಿಪಡಿಸುವುದಾಗಿ ಹೇಳಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com