ಅಮೆರಿಕದಲ್ಲಿ ಉಪಾಧ್ಯಕ್ಷೆ ಆಗಿದ್ದು ಈಗ, ಭಾರತದಲ್ಲಿ 50 ವರ್ಷ ಹಿಂದೆಯೇ ಮಹಿಳೆ ಪ್ರಧಾನಿ ಆದರು: ಪ್ರಿಯಾಂಕಾ ಗಾಂಧಿ 

ಅಮೆರಿಕದ ಮೊದಲ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅವರನ್ನು ದೇಶದ ಜನತೆ ಈಗ ಆಯ್ಕೆ ಮಾಡಿದರೆ ಭಾರತದಲ್ಲಿ ಇಂದಿರಾ ಗಾಂಧಿಯವರನ್ನು 50 ವರ್ಷಗಳ ಹಿಂದೆಯೇ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ

ನವದೆಹಲಿ: ದಿವಂಗತ ಮಾಜಿ ಪ್ರಧಾನಿ ತಮ್ಮ ಅಜ್ಜಿ ಇಂದಿರಾ ಗಾಂಧಿಯವರ 103ನೇ ಜಯಂತಿ ಸಂದರ್ಭದಲ್ಲಿ ನಮನ ಸಲ್ಲಿಸಿದ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಮೆರಿಕದ ಮೊದಲ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅವರನ್ನು ದೇಶದ ಜನತೆ ಈಗ ಆಯ್ಕೆ ಮಾಡಿದರೆ ಭಾರತದಲ್ಲಿ ಇಂದಿರಾ ಗಾಂಧಿಯವರನ್ನು 50 ವರ್ಷಗಳ ಹಿಂದೆಯೇ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿದ್ದರು ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಮಲಾ ಹ್ಯಾರಿಸ್ ರವರು ಅಮೆರಿಕದ ಮೊದಲ ಉಪಾಧ್ಯಕ್ಷೆಯಾಗಿದ್ದಾರೆ. ಇಂದಿರಾ ಗಾಂಧಿಯವರ ಜಯಂತಿ ಸಂದರ್ಭದಲ್ಲಿ ಮಹಿಳಾ ಪ್ರಧಾನ ಮಂತ್ರಿಯಾಗಿ ಅವರನ್ನು ಭಾರತೀಯರು 50 ವರ್ಷಗಳ ಹಿಂದೆಯೇ ಆಯ್ಕೆ ಮಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂದಿರಾ ಗಾಂಧಿಯವರ ಧೈರ್ಯ, ಶಕ್ತಿ ವಿಶ್ವದ ಮಹಿಳೆಯರಿಗೆ ಯಾವತ್ತಿಗೂ ಒಂದು ಸ್ಪೂರ್ತಿ ಎಂದು ಬರೆದಿದ್ದಾರೆ.

ನವೆಂಬರ್ 19, 1917ರಲ್ಲಿ ಪಂಡಿತ್ ಜವಹರಲಾಲ್ ನೆಹರೂ ಮತ್ತು ಕಮಲಾ ನೆಹರೂ ಅವರಿಗೆ ಜನಿಸಿದ್ದ ಇಂದಿರಾ ಗಾಂಧಿ, ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಇವರು ದೇಶವನ್ನು ಪ್ರಧಾನ ಮಂತ್ರಿಯಾಗಿ 1966ರಿಂದ 1977ರವರೆಗೆ, ನಂತರ ಜನವರಿ 1980ರಿಂದ 1984ರವರೆಗೆ ತಮ್ಮ ಹತ್ಯೆಯಾಗುವವರೆಗೆ ಆಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com