ಚೆನ್ನೈ: ಅಮಿತ್ ಶಾ ಮೇಲೆ ಪ್ಲೇಕಾರ್ಡ್ ಎಸೆದ 60 ವರ್ಷದ ವ್ಯಕ್ತಿ, ಆತಂಕ ಸೃಷ್ಟಿ

ಚೆನ್ನೈಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಐಎಡಿಎಂಕೆ ಮತ್ತು ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ಆದರೆ ಈ ವೇಳೆ ವ್ಯಕ್ತಿಯೊಬ್ಬ ಅಮಿತ್ ಶಾ ಮೇಲೆ ಫಲಕ ಎಸೆದಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. 

Published: 21st November 2020 05:18 PM  |   Last Updated: 21st November 2020 05:18 PM   |  A+A-


amith-chk1

ಚೆನ್ನೈನಲ್ಲಿ ಅಮಿತ್ ಶಾ

Posted By : Lingaraj Badiger
Source : The New Indian Express

ಚೆನ್ನೈ: ಚೆನ್ನೈಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಐಎಡಿಎಂಕೆ ಮತ್ತು ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ಆದರೆ ಈ ವೇಳೆ ವ್ಯಕ್ತಿಯೊಬ್ಬ ಅಮಿತ್ ಶಾ ಮೇಲೆ ಫಲಕ ಎಸೆದಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. 

ಇಂದು ನಗರಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ವಿಮಾನ ನಿಲ್ದಾಣದ ಬಳಿ ತಮ್ಮನ್ನು ಸ್ವಾಗತಿಸಲು ಬಂದ ಪ್ರೇಕ್ಷಕರಿಗೆ ಶುಭಾಶಯ ಕೋರಲು ವಾಹನದಿಂದ ಕೆಳಗೆ ಇಳಿದಿದ್ದರು. ಈ ವೇಳೆ 60 ವರ್ಷದ ವ್ಯಕ್ತಿಯೊಬ್ಬರು ಕೇಂದ್ರ ಸಚಿವರ ಮೇಲೆ ಫಲಕ ಎಸೆದಿದ್ದು, ಅದೃಷ್ಟವಶಾತ್ ಅದು ಅಮಿತ್ ಶಾ ಅವರಿಗೆ ತಗುಲಿಲ್ಲ. ಪ್ಲೇಕಾರ್ಡ್ ಎಸೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದುರೈರಾಜ್ ಎಂದು ಗುರುತಿಸಲಾಗಿದೆ.

ಅಮಿತ್ ಶಾ ಅವರು ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಮತ್ತು ಬಿಜೆಪಿಯ ಕಾರ್ಯಕರ್ತರ ಬಳಿ ತೆರಳಿದರು. ಈ ವೇಳೆ ದುರೈರಾಜ್ ಅವರು ತಮ್ಮ ಕೈಯಲ್ಲಿದ್ದ ಫಲಕವನ್ನು ಎಸೆದಿದ್ದಾರೆ. ಆದರೆ ಅದನ್ನು ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸರು ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರು ಪೊಲೀಸರ ಬಳಿ ತೆರಳಿ ವಿಚಾರಿಸಿದ್ದು, ದುರೈರಾಜ್ ಒಬ್ಬ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp