ಮೀಟೂ: ಮಾನಹಾನಿ ಪ್ರಕರಣದಲ್ಲಿ ಅಕ್ಬರ್, ಪ್ರಿಯಾ ರಮಣಿ ನಡುವೆ ರಾಜಿಗೆ ಅವಕಾಶ ಇದೆಯೇ?- ನ್ಯಾಯಾಲಯ

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ರಾಜಿಗೆ ಅವಕಾಶ ಇದೆಯಾ  ಎಂದು ದೆಹಲಿಯ ನ್ಯಾಯಾಲಯವೊಂದು 
ಶನಿವಾರ ಕೇಳಿದೆ.

Published: 21st November 2020 05:17 PM  |   Last Updated: 21st November 2020 06:53 PM   |  A+A-


Akbar_Ramani1

ಎಂಜೆ ಅಕ್ಬರ್, ಪ್ರಿಯಾ ರಮಣಿ

Posted By : Nagaraja AB
Source : The New Indian Express

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂಜೆ ಅಕ್ಬರ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ರಾಜಿಗೆ ಅವಕಾಶ ಇದೆಯೇ ಎಂದು ದೆಹಲಿಯ ನ್ಯಾಯಾಲಯವೊಂದು ಶನಿವಾರ ಕೇಳಿದೆ.

20 ವರ್ಷಗಳ ಹಿಂದೆ ಪತ್ರಕರ್ತೆಯಾಗಿದ್ದ ಸಮಯದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದ ಪ್ರಿಯಾ ರಮಣಿ ವಿರುದ್ಧ ಎಂ. ಜೆ. ಅಕ್ಬರ್ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

2018ರಲ್ಲಿ ಮೀಟೂ ಅಭಿಯಾನದಲ್ಲಿ ಎಂಜೆ ಅಕ್ಬರ್ ವಿರುದ್ಧ ರಮಣಿ ಆರೋಪ ಮಾಡಿದ್ದರು. ಸಾರ್ವಜನಿಕ ಒಳಿತಿಗಾಗಿ ಸತ್ಯವನ್ನು ಬಹಿರಂಗಪಡಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು.

ಈ ಪ್ರಕರಣದ ಬಗ್ಗೆ ಅಂತಿಮ ವಾದವನ್ನು ಇಂದು ಆರಂಭಿಸಿದ  ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ರವೀಂದ್ರ ಕುಮಾರ್ ಪಾಂಡೆ ಈ ಪ್ರಶ್ನೆಯನ್ನು ಮುಂದಿಟ್ಟರು. ಅಕ್ಬರ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಗೀತಾ ಲೂರ್ಥಾ, ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮುನ್ನ ತನ್ನ ಕಕ್ಷಿದಾರರ ಮಾತನಾಡಬೇಕಿದ್ದು, ಸಮಯದ ಅಗತ್ಯವಿದೆ ಎಂದರು.

ಈ ಪ್ರಕರಣದ ಸಂಗತಿಗಳು ವಿಚಿತ್ರವಾದ ಕಾರಣ ರಾಜಿಗೆ ಕಡಿಮೆ ಅವಕಾಶವಿದೆ ಎಂದು ರಮಣಿಯ ಪರ ವಕೀಲ ಭಾವೂಕ್ ಚೌಹಾನ್ ಹೇಳಿದ್ದಾರೆ. ಒಪ್ಪಂದದ ಬಗ್ಗೆ ಇಬ್ಬರು ಪ್ರತಿಕ್ರಿಯಿಸುವಂತೆ ತಿಳಿಸಿದ ನ್ಯಾಯಾಲಯ, ನವೆಂಬರ್ 24ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿತು.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp