ಖಾಸಗಿ ಆಸ್ಪತ್ರೆಗಳಿಂದ ಅತಿಯಾದ ಶುಲ್ಕ; ಆರೋಗ್ಯದ ಮೇಲಿನ ಖರ್ಚು ಕಳಪೆ: ಕೋವಿಡ್-19 ಕುರಿತು ಸಂಸತ್ ಸಮಿತಿ

ಸರ್ಕಾರಿ ಆಸ್ಪತ್ರೆಗಳಲ್ಲಿ ಅಸಮರ್ಪಕ ಹಾಸಿಗೆಗಳು, ಕೋವಿಡ್-19 ಚಿಕಿತ್ಸೆಯ ನಿರ್ದಿಷ್ಟ ಮಾರ್ಗಸೂಚಿಗಳ ಅನುಪಸ್ಥಿತಿ ಖಾಸಗಿ ಆಸ್ಪತ್ರೆಗಳು ಅತಿ ಹೆಚ್ಚಿನ ಶುಲ್ಕ ವಿಧಿಸುವುದಕ್ಕೆ ಕಾರಣವಾಗಿದ್ದು, ಸುಸ್ಥಿರ ಬೆಲೆ ಮಾದರಿಳಿಂದ ಕೋವಿಡ್-19 ನಿಂದ ಉಂಟಾಗುತ್ತಿರುವ ಅನೇಕ ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಸಂಸತ್ ಸಮಿತಿ ವರದಿ ನೀಡಿದೆ. 

Published: 21st November 2020 08:49 PM  |   Last Updated: 21st November 2020 08:49 PM   |  A+A-


Private hospitals charged exorbitant fees, spending on health abysmal: Parliament panel on COVID-19

ಖಾಸಗಿ ಆಸ್ಪತ್ರೆಗಳಿಂದ ಅತಿಯಾದ ಶುಲ್ಕ; ಆರೋಗ್ಯದ ಮೇಲಿನ ಖರ್ಚು ಕಳಪೆ: ಕೋವಿಡ್-19 ಕುರಿತು ಸಂಸತ್ ಸಮಿತಿ

Posted By : Srinivas Rao BV
Source : The New Indian Express

ನವದೆಹಲಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಅಸಮರ್ಪಕ ಹಾಸಿಗೆಗಳು, ಕೋವಿಡ್-19 ಚಿಕಿತ್ಸೆಯ ನಿರ್ದಿಷ್ಟ ಮಾರ್ಗಸೂಚಿಗಳ ಅನುಪಸ್ಥಿತಿ ಖಾಸಗಿ ಆಸ್ಪತ್ರೆಗಳು ಅತಿ ಹೆಚ್ಚಿನ ಶುಲ್ಕ ವಿಧಿಸುವುದಕ್ಕೆ ಕಾರಣವಾಗಿದ್ದು, ಸುಸ್ಥಿರ ಬೆಲೆ ಮಾದರಿಳಿಂದ ಕೋವಿಡ್-19ನಿಂದ ಉಂಟಾಗುತ್ತಿರುವ ಅನೇಕ ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಸಂಸತ್ ಸಮಿತಿ ವರದಿ ನೀಡಿದೆ. 

ಇದೇ ಮೊದಲ ಬಾರಿಗೆ ಸರ್ಕಾರ ಆರೋಗ್ಯದ ಮೇಲೆ ಖರ್ಚು ಮಾಡುತ್ತಿರುವುದರ ಬಗ್ಗೆ ಹಾಗೂ ಕೋವಿಡ್-19 ನಿರ್ವಹಣೆಯ ಬಗ್ಗೆ ಸಂಸತ್ ಸಮಿತಿಯೊಂದು ವರದಿ ನೀಡಿದೆ. 

ಆರೋಗ್ಯದ ಮೇಲಿನ ಸಂಸತ್ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಮ್ ಗೋಪಾಲ್ ಯಾದವ್, 1.3 ಬಿಲಿಯನ್ ಜನಸಂಖ್ಯೆ ಇರುವ ದೇಶದಲ್ಲಿ ಆರೋಗ್ಯಕ್ಕಾಗಿ ಮಾಡುತ್ತಿರುವ ಖರ್ಚು ಅತ್ಯಂತ ಕಡಿಮೆ, ಭಾರತೀಯ ಆರೋಗ್ಯ ವ್ಯವಸ್ಥೆ ಕೋವಿಡ್-19 ನಿರ್ವಹಣೆಯಲ್ಲಿ ಪರಿಣಾಮಕಾರಿ ಪ್ರತಿಕ್ರಿಯೆ ತೋರಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಲ್ಲಿ ಹೇಳಿದ್ದು, ಕೋವಿಡ್-19 ಸಾಂಕ್ರಾಮಿಕ ಸ್ಫೋಟ ಹಾಗೂ ಅದರ ನಿರ್ವಹಣೆ ಎಂಬ ವರದಿಯನ್ನು ರಾಜ್ಯಸಭಾಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಕೆ ಮಾಡಲಾಗಿದೆ.

"ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಹೂಡಿಕೆಯನ್ನು ಹೆಚ್ಚಿಸಬೇಕು, ಎರಡು ವರ್ಷಗಳಲ್ಲಿ ಜಿಡಿಪಿ ಶೇ.2.4 ರಷ್ಟು ಖರ್ಚು ಮಾಡುವುದು ಇನ್ನೂ ದೂರದ ಮಾತಾಗಿದೆ, ಅಲ್ಲಿಯವರೆಗೂ ಸಾರ್ವಜನಿಕ ಆರೋಗ್ಯ ಅಪಾಯಕ್ಕೆ ಸಿಲುಕಲಿದೆ, ಆದ್ದರಿಂದ ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಹೂಡಿಕೆಯನ್ನು ಹೆಚ್ಚಿಸಬೇಕು ಎಂದು" ಸಮಿತಿ ಶಿಫಾರಸು ಮಾಡಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp