ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ: ಪ್ರಯಾಣಿಕರ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲು ಪಂಜಾಬ್ ರೈತರ ಒಪ್ಪಿಗೆ 

 ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ರೈತ ಸಂಘಟನೆಗಳು ಸೋಮವಾರದಿಂದ ರೈಲು ಸಂಚಾರ ನಿರ್ಬಂಧವನ್ನು ತೆರವುಗೊಳಿಸುವುದಾಗಿ ಶನಿವಾರ ಪ್ರಕಟಿಸಿವೆ.

Published: 21st November 2020 06:09 PM  |   Last Updated: 21st November 2020 06:54 PM   |  A+A-


Farmers1

ರೈತರ ಚಿತ್ರ

Posted By : Nagaraja AB
Source : The New Indian Express

ಚಂಡೀಗಢ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ರೈತ ಸಂಘಟನೆಗಳು ಸೋಮವಾರದಿಂದ ರೈಲು ಸಂಚಾರ ನಿರ್ಬಂಧವನ್ನು ತೆರವುಗೊಳಿಸುವುದಾಗಿ ಶನಿವಾರ ಪ್ರಕಟಿಸಿವೆ.

ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆಗೆ ವಿವಿಧ ರೈತ ಮುಖಂಡರು ಸಭೆ ನಡೆಸಿದ ಬಳಿಕ ರಾಜ್ಯದಲ್ಲಿ ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. 

ಸೋಮವಾರದಿಂದ ರೈಲು ದಿಗ್ಬಂದನವನ್ನು ಸಂಪೂರ್ಣ ತೆಗೆದುಹಾಕುವ ಮೂಲಕ ಸರಕು ಮತ್ತು ಪ್ರಯಾಣಿಕರ ರೈಲುಗಳಿಗೆ ಅವಕಾಶ ಕಲ್ಪಿಸಲು ಪಂಜಾಬ್ ರೈತರು ಮುಖ್ಯಮಂತ್ರಿ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 24 ರಿಂದ ರೈಲು ರೊಕೊ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳು, ರೈಲು ಹಳಿ ತೆರವಿನ ಜೊತೆಗೆ ಸರಕು ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಈಗಾಗಲೇ ಒಪ್ಪಿಕೊಂಡಿದ್ದವು. 

ಆದರೆ, ರೈಲುಗಳನ್ನು ಪುನರ್ ಆರಂಭಿಸುವುದರ ಬಗ್ಗೆ ಪ್ರತಿಭಟನಾ ನಿರತ ರೈತರು ಮತ್ತು ರೈಲ್ವೆ ನಡುವೆ ಗೊಂದಲವು ಮುಂದುವರೆದಿತ್ತು. ಸರಕು ರೈಲುಗಳ ಪುನರ್ ಆರಂಭಕ್ಕೆ ರೈಲ್ವೆ ನಿರಾಕರಿಸಿತ್ತು. ರಾಜ್ಯ ಸರ್ಕಾರದಿಂದ ಸಂಪೂರ್ಣ ಭರವಸೆ ಸಿಗುವವರೆಗೂ ಸರಕು ಮತ್ತು ಪ್ರಯಾಣಿಕರ ರೈಲುಗಳನ್ನು ಓಡಿಸುವುದಿಲ್ಲ ಎಂದು ರೈಲ್ವೆ ಹೇಳಿತ್ತು.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp