ಉತ್ತರ ಪ್ರದೇಶ: ಪಕ್ಕದ ಕೋಣೆಯಲ್ಲಿ ಮಕ್ಕಳಿರುವಾಗಲೇ ದಂತ ವೈದ್ಯೆ ಬರ್ಬರ ಹತ್ಯೆ

ಸೆಟ್ ಟಾಪ್ ಬಾಕ್ಸ್ ರೀಚಾರ್ಜ್ ಮಾಡುವ ನೆಪದಲ್ಲಿ ಬಂದ ಹಂತಕನೊಬ್ಬ ದಂತ ವೈದ್ಯೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಗ್ರಾ: ಸೆಟ್ ಟಾಪ್ ಬಾಕ್ಸ್ ರೀಚಾರ್ಜ್ ಮಾಡುವ ನೆಪದಲ್ಲಿ ಬಂದ ಹಂತಕನೊಬ್ಬ ದಂತ ವೈದ್ಯೆಯನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಡಾ. ನಿಶಾ ಸಿಂಘಾಲ್ ಕೊಲೆಯಾದ ದುರ್ದೈವಿ, ನಿಶಾ ಅವರಿಗೆ 8 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದು, ಇಬ್ಬರು ಪಕ್ಕದ ಕೋಣೆಯಲ್ಲಿದ್ದರು. ಈ ವೇಳೆಯೇ ವೈದ್ಯೆಯ ಹತ್ಯೆಯಾಗಿದೆ.

ಹರಿತವಾದ ಚಾಕುವಿನಿಂದ ನಿಶಾ ಅವರ ಕತ್ತು ಸೀಳಲಾಗಿದೆ, ಮಕ್ಕಳ ಮೇಲೂ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಶಾ ಅವರ ಪತಿ ಅಜಯ್ ಕೂಡ ಸರ್ಜನ್ ಆಗಿದ್ದು, ಕೊಲೆ ನಡೆದ ಸಂದರ್ಭದಲ್ಲಿ ಅವರು ಡ್ಯೂಟಿಯಲ್ಲಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com