ಕೊರೋನಾ, 2 ನೇ ವಿಶ್ವಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು: ಜಿ-20ಯಲ್ಲಿ ಮೋದಿ ಮಾತು

ಎರಡನೇ ವಿಶ್ವಯುದ್ಧದ ಬಳಿಕ, ಕೋವಿಡ್-19 ಸಾಂಕ್ರಾಮಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದ್ದು, ಮಾನವ ಇತಿಹಾಸದಲ್ಲಿ ಮಹತ್ವದ ತಿರುವು ಎಂದು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುಯಲ್ ಜಿ-20 ಶೃಂಗಸಭೆಯಲ್ಲಿ ಹೇಳಿದ್ದಾರೆ. 

Published: 22nd November 2020 12:43 AM  |   Last Updated: 22nd November 2020 12:43 AM   |  A+A-


PM Modi

ಪ್ರಧಾನಿ ನರೇಂದ್ರ ಮೋದಿ

Posted By : Srinivas Rao BV
Source : The New Indian Express

ನವದೆಹಲಿ: ಎರಡನೇ ವಿಶ್ವಯುದ್ಧದ ಬಳಿಕ, ಕೋವಿಡ್-19 ಸಾಂಕ್ರಾಮಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದ್ದು, ಮಾನವ ಇತಿಹಾಸದಲ್ಲಿ ಮಹತ್ವದ ತಿರುವು ಎಂದು ಪ್ರಧಾನಿ ನರೇಂದ್ರ ಮೋದಿ ವರ್ಚ್ಯುಯಲ್ ಜಿ-20 ಶೃಂಗಸಭೆಯಲ್ಲಿ ಹೇಳಿದ್ದಾರೆ. 

ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಐಟಿ ಸಾಮರ್ಥ್ಯದ ಬಗ್ಗೆ ಗಮನ ಸೆಳೆದಿದ್ದು, ಕೋವಿಡ್ ನಂತರದ ಪರಿಸ್ಥಿತಿಗಳು ವರ್ಕ್ ಫ್ರಮ್ ಎನಿವೇರ್ ಪರಿಕಲ್ಪನೆಯನ್ನು ಸಾಮಾನ್ಯಗೊಳಿಸಿದೆ ಎಂದು ಹೇಳಿದ್ದು, ವರ್ಚ್ಯುಯಲ್ ಜಿ-20 ಸೆಕ್ರೆಟರಿಯಟ್ ಸ್ಥಾಪನೆಗೂ ಸಲಹೆ ನೀಡಿದ್ದಾರೆ.

ಇದೇ ವೇಳೆ ಕೊರೋನೋತ್ತರ ಜಗತ್ತಿಗಾಗಿ ಹೊಸ ಗ್ಲೋಬಲ್ ಇಂಡೆಕ್ಸ್ ನ್ನು ಅಭಿವೃದ್ಧಿಪಡಿಸುವುದಕ್ಕೂ ಮೋದಿ ಸಲಹೆ ನೀಡಿದ್ದು, ವ್ಯಾಪಕ ಪ್ರತಿಭೆಗಳ ಸೃಷ್ಟಿ, ಸಮಾಜದ ಎಲ್ಲಾ ಭಾಗಗಳಿಗೂ ತಂತ್ರಜ್ಞಾನ ತಲುಪುವಂತೆ ಮಾಡುವುದು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಭೂಮಿ ತಾಯಿಯೆಡೆಗೆ ವಿಶ್ವಸ್ತ ರೀತಿಯಲ್ಲಿರುವುದನ್ನೊಳಗೊಂಡ ಅಂಶಗಳು ಇರಬೇಕು ಎಂದು ಮೋದಿ ಹೇಳಿದ್ದು, ಇವುಗಳ ಆಧಾರದಲ್ಲಿ ಹೊಸ ಜಗತ್ತಿಗೆ ಜಿ-20 ಅಡಿಪಾಯ ಹಾಕಬಹುದೆಂದು ಹೇಳಿದ್ದಾರೆ. 

ಸೌದಿ ಅರೇಬಿಯಾದ ರಾಜ ಸಲ್ಮಾನ್ ಜಿ-20 ಶೃಂಗಸಭೆಗೆ ಚಾಲನೆ ನೀಡಿದರು. ಭಾರತ 2022 ರ ಜಿ-20 ಶೃಂಗಸಭೆಯನ್ನು ಆಯೋಜಿಸಲು ನಿಗದಿಯಾಗಿದೆ
 

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp