ಜಾರ್ಖಂಡ್: ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಪಡೆಯಲು ತಂದೆಯನ್ನೆ ಕೊಂದ ಪುತ್ರನ ಬಂಧನ

ಅನುಕಂಪದ ಆಧಾರದ ಮೇಲೆ  ಸರ್ಕಾರಿ ಕೆಲಸ ಪಡೆಯಲು ತನ್ನ ತಂದೆಯನ್ನೇ ಪಾಪಿ ಪುತ್ರನೊಬ್ಬ ಹತ್ಯೆ ಮಾಡಿರುವ ಆತಂಕಕಾರಿ ಸುದ್ದಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ: ಅನುಕಂಪದ ಆಧಾರದ ಮೇಲೆ  ಸರ್ಕಾರಿ ಕೆಲಸ ಪಡೆಯಲು ತನ್ನ ತಂದೆಯನ್ನೇ ಪಾಪಿ ಪುತ್ರನೊಬ್ಬ ಹತ್ಯೆ ಮಾಡಿರುವ ಆತಂಕಕಾರಿ ಸುದ್ದಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

ಮೊದಲಿಗೆ ವಯಸ್ಸಾದ ತಂದೆಯ ತಲೆಗೆ ಹೊಡೆದು ಹತ್ಯೆ ಮಾಡಿರುವ ಹಂತಕ ಪುತ್ರ, ನಂತರ ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದ ಎಂದು ರಾಮಘಡ ಪೊಲೀಸರು ತಿಳಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಘಟನೆ ನಡೆದ 72 ಗಂಟೆಯೊಳಗೆ ಆರೋಪಿ ಬೋಲಾ ರಾಮ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಮಾಡಲು ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಪ್ರಕಾಶ್ ಚಂದ್ರ ಮಹತೋ ತಿಳಿಸಿದ್ದಾರೆ.

ಮೃತರಾದ 50 ವರ್ಷದ ಕೃಷ್ಣ ರಾಮ್ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ ( ಸಿಸಿಎಲ್ ) ವರ್ಕ್ ಶಾಪ್ ನಲ್ಲಿ ಹಿರಿಯ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಲಾಕ್ ಡೌನ್ ಮುಂಚೆ ಆತನ ಪತ್ನಿ ಊರಿಗೆ ಹೋದ ನಂತರ ಮನೆಯಲ್ಲಿ ಏಕಾಂಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ.

ಆರೋಪಿ ಬೋಲಾರಾಮ್ ತನ್ನ ತಂದೆಯನ್ನು ಕೊಲ್ಲುವ ಉದ್ದೇಶದಿಂದ ನವೆಂಬರ್ 17 ರಂದೇ ಬರ್ಕಾನಾ ಹಳ್ಳಿಗೆ ಹೋಗಿದ್ದಾನೆ. ಆದರೆ, ಅದು ವಿಫಲನಾಗಿದ್ದು, ಮಾರನೇ ದಿನ ತನ್ನ ತಂದೆಯನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾನೆ. ಹತ್ಯೆ ಮಾಡಿದ ನಂತರ ರಾಂಚಿಗೆ ತಲುಪಿದ ಬೋಲಾರಾಮ್  ನವೆಂಬರ್ 19 ರಂದು  ಔರಾಂಗಾಬಾದಿಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com