ನಗ್ರೋಟಾ ಎನ್ಕೌಂಟರ್: ಹತ್ಯೆಯಾದ ಉಗ್ರರು ಪಾಕಿಸ್ತಾನ ಉಗ್ರ ಸಂಘಟನೆಯ ನಾಯಕರೊಂದಿಗೆ ನಂಟು ಹೊಂದಿದ್ದರು!

ನಗ್ರೋಟಾ ಎನ್ಕೌಂಟರ್'ನಲ್ಲಿ ಬಲಿಯಾದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಉಗ್ರರೂ ಪಾಕಿಸ್ತಾನ ಉಗ್ರ ಸಂಘಟನೆಯ ನಾಯಕರು ಹಾಗೂ ಸೇನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. 
ಎನ್ಕೌಂಟರ್ ನಡೆದ ಸ್ಥಳದಲ್ಲಿ ಭದ್ರತಾಪಡೆಗಳು
ಎನ್ಕೌಂಟರ್ ನಡೆದ ಸ್ಥಳದಲ್ಲಿ ಭದ್ರತಾಪಡೆಗಳು

ನವದೆಹಲಿ: ನಗ್ರೋಟಾ ಎನ್ಕೌಂಟರ್'ನಲ್ಲಿ ಬಲಿಯಾದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಉಗ್ರರೂ ಪಾಕಿಸ್ತಾನ ಉಗ್ರ ಸಂಘಟನೆಯ ನಾಯಕರು ಹಾಗೂ ಸೇನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. 

ಎನ್ಕೌಂಟರ್ ನಡೆದ ಸ್ಧಳದಲ್ಲಿ ಭದ್ರತಾಪಡೆಗಳು ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ವಸ್ತುಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ಹೇಳಲಾಗುತ್ತಿದೆ. 

ಘಟನಾ ಸ್ಥಳದಲ್ಲಿ ಸೇನಾಪಡೆಗಳು ಮೊಬೈಲ್ ಹ್ಯಾಂಡ್'ಸೆಟ್ (ಎಂಪಿಡಿ 2505 ಮಾದರಿ), ಡಿಜಿಟಲ್ ರೇಡಿಯೋ ಮತ್ತು ಪಾಕಿಸ್ತಾನಿ ಸಿಮ್ ಕಾರ್ಡ್'ಗಳು ವೈರ್'ಲೆಸ್ ಸೆಟ್, ಜಿಪಿಎಸ್ ಡಿವೈಸ್, ಪಾಕ್ ನಿರ್ಮಿತ ಶೂಗಳು ಇವೆ. ಕರಾಚಿ ನಿರ್ಮಿತ ಔಷದಗಳೂ ಸಿಕ್ಕಿವೆ. ಮೊಬೈಲ್ ಫೋನ್'ಗೆ ಬಂದಿರುವ ಸಂದೇಶ ಇವುಗಳನ್ನೆಲ್ಲ ಗಮನಿಸಿದರೆ ಪಾಕ್ ಕೈವಾಡವಿರುವುದು ಕಂಡು ಬಂದಿದೆ. 

ಈ ನಡುವೆ ಭದ್ರತಾ ಪಡೆಗಳಿಗೆ ಸಿಕ್ಕಿರುವ ಫೋನ್'ನಲ್ಲಿ ಕೆಲ ಸಂದೇಶಗಳೂ ಕೂಡ ಕಂಡು ಬಂದಿವೆ. ಎಲ್ಲಿಗೆ ತಲುಪಿದ್ರಿ, ಹೇಗಿದೆ ಅಲ್ಲಿನ ಪರಿಸ್ಥಿತಿ, ಇದೂವರೆಗೂ ಯಾವ ತೊಂದರೆ ಆಗಿಲ್ಲ ಎಂದು ಭಾವಿಸುತ್ತೇನೆಂದು ಹೇಳಿರುವ ಕಂಡು ಬಂದಿದೆ. ಇದಕ್ಕೆ ಉಗ್ರರು ಪ್ರತಿಕ್ರಿಯೆ ನೀಡಿ, ಇದೂವರೆಗೆ ತೊಂದರೆಯಾಗಿಲ್ಲ. 2 ಗಂಟೆಗೆ ತಲುಪಿದ್ವಿ, ಆ ಮೇಲೆ ಎಲ್ಲಾ ವಿಚಾರವನ್ನು ತಿಳಿಸುತ್ತೇವೆಂದು ಹೇಳಿರುವ ಸಂದೇಶಗಳು ಕಾಣಿಸಿವೆ. 

ಕಳೆದ ಗುರುವಾರವಷ್ಟೇ ಈ ತಿಂಗಳಾಂತ್ಯಕ್ಕೆ ನಡೆಯಲಿರುವ ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ವೇಳೆ ಭಾರೀ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ನಾಲ್ವರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರನ್ನು ಸಿಆರ್'ಪಿಎಫ್ ಯೋಧರು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು. 

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಜಮ್ಮು ನಗರದ ಹೊರವಲಯದ ಟೋಲ್ ಪ್ಲಾಜಾ ಬಳಿ ಪಾಕಿಸ್ತಾನದಿಂದ ಒಳನುಸುಳಿ ಬಂದಿದ್ದ ಉಗ್ರರು ಹಾಗೂ ಭದ್ರತಾಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ನಾಲ್ವರು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿತ್ತು. ಘಟನೆಯಲ್ಲಿ ಇಬ್ಬರು ಪೊಲೀಸರು ಕೂಡ ಗಂಭೀರವಾಗಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com