ಕಾಂಗ್ರೆಸ್ ಲ್ಲಿ ನಾಯಕತ್ವದ ಬಿಕ್ಕಟ್ಟು ಇಲ್ಲ, ಸೋನಿಯಾ-ರಾಹುಲ್ ಗಾಂಧಿಯವರಿಗೆ ಬೆಂಬಲ ಇದೆ: ಸಲ್ಮಾನ್ ಖುರ್ಷಿದ್ 

ಬಿಹಾರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ನಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಹೆಚ್ಚಾಗಿರುವುದರ ಮಧ್ಯೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮತ್ತೆ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರು ನಾಯಕತ್ವದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ.
ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ನಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಹೆಚ್ಚಾಗಿರುವುದರ ಮಧ್ಯೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮತ್ತೆ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರು ನಾಯಕತ್ವದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ.

ಈ ಬಗ್ಗೆ ಪಿಟಿ ಸಂದರ್ಶನದಲ್ಲಿ ಮಾತನಾಡಿರುವ ಅವರು, ಹಿರಿಯ ನಾಯಕ ಸಲ್ಮಾನ್ ಖರ್ಷಿದ್, ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ಇಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಎಲ್ಲರ ಬೆಂಬಲವಿದೆ ಎಂದು ಕುರುಡರಲ್ಲದ ಎಲ್ಲರಿಗೂ ಅರ್ಥವಾಗುತ್ತದೆ ಮತ್ತು ಗೊತ್ತಾಗುತ್ತದೆ ಎಂದಿದ್ದಾರೆ.

ಗಾಂಧಿ ಕುಟುಂಬಕ್ಕೆ ಸಲ್ಮಾನ್ ಖರ್ಷಿದ್ ಆಪ್ತರಾಗಿದ್ದು, ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಕಾಂಗ್ರೆಸ್ ನಲ್ಲಿ ಸಾಕಷ್ಟು ವೇದಿಕೆಗಳಿದ್ದು ಪಕ್ಷದಿಂದ ಹೊರಗೆ ಹೇಳಿದರೆ, ಮಾತನಾಡಿದರೆ ಅದು ನೋವುಂಟುಮಾಡುತ್ತದೆಎಂದು ಪರೋಕ್ಷವಾಗಿ ಕಪಿಲ್ ಸಿಬಲ್ ಮತ್ತು ಇತರ ಭಿನ್ನಾಭಿಪ್ರಾಯ ಹೊಂದಿರುವ ನಾಯಕರನ್ನು ಉದ್ದೇಶಿಸಿ ಹೇಳಿದರು.

ನಾಯಕರು ನನ್ನ ಮಾತುಗಳನ್ನು ಕೇಳುತ್ತಾರೆ, ನನಗೆ ಅವಕಾಶ ಕೊಟ್ಟರೆ ಅವರಿಗೆ ಸಹ ಅವಕಾಶ ಸಿಕ್ಕಿರುತ್ತದೆ. ನಾಯಕರು ನಮ್ಮ ಮಾತುಗಳನ್ನು ಕೇಳುವುದಿಲ್ಲ ಎಂಬ ಹೇಳಿಕೆಗಳು ಎಲ್ಲಿಂದ ಬರುತ್ತವೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹಾಗೂ ಇತ್ತೀಚಿನ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಕಳಪೆ ಸಾಧನೆ ಬಗ್ಗೆ ಕಪಿಲ್ ಸಿಬಲ್, ಪಿ ಚಿದಂಬರಂ ಮೊದಲಾದ ನಾಯಕರ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ, ಅವರು ಹೇಳಿದ್ದನ್ನು ಸಂಪೂರ್ಣವಾಗಿ ನಾನು ಅಲ್ಲಗಳೆಯುವುದಿಲ್ಲ. ಆದರೆ ಅವರು ಮಾಧ್ಯಮದ ಎದುರು ಹೋಗಿ ನಮ್ಮ ಪಕ್ಷದಲ್ಲಿ ಹೀಗಾಗುತ್ತಿದೆ, ಹೀಗಾಗಬೇಕು , ನಮಗೆ ಇದು ಅಗತ್ಯವಿದೆ ಎಂದು ಏಕೆ ಹೇಳಬೇಕು?

ಪಕ್ಷದಲ್ಲಿ ವಿಶ್ಲೇಷಣೆ ಎಲ್ಲಾ ಕಾಲದಲ್ಲೂ ನಡೆಯುತ್ತಿರಬೇಕು, ವಿಶ್ಲೇಷಣೆ ಬಗ್ಗೆ ಇಲ್ಲಿ ತಕರಾರು ಇಲ್ಲ. ಎಲ್ಲಿ ತಪ್ಪಾಗಿದೆ, ನಾವು ಎಲ್ಲಿ ಚೆನ್ನಾಗಿ ಮಾಡಬಹುದಾಗಿತ್ತು. ಏನು ಮಾಡಬೇಕಾಗಿತ್ತು, ಮುಂದು ಏನು ಮಾಡಬೇಕು ಎಂಬ ಬಗ್ಗೆ ಪಕ್ಷದೊಳಗೆ ನಾಯಕರ ಸಮ್ಮುಖದಲ್ಲಿ ಚರ್ಚೆ ಮಾಡೋಣ, ಅದು ಬಿಟ್ಟು ಸಾರ್ವಜನಿಕವಾಗಿ ಬಹಿರಂಗವಾಗಿ ಹೇಳುವುದು ಸರಿಯಲ್ಲ ಎಂದು ಸಲ್ಮಾನ್ ಖರ್ಷಿದ್ ಹೇಳಿದ್ದಾರೆ.

ಇತ್ತೀಚೆಗೆ ಹೇಳಿಕೆ ನೀಡಿದ್ದ ಕಪಿಲ್ ಸಿಬಲ್, ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಕಳೆದಿದೆ. ಜನರು ಕಾಂಗ್ರೆಸ್ ನ್ನು ಇಂದು ಆಡಳಿತ ಪಕ್ಷದ ಬದಲಾಗಿ ಪರಿಣಾಮಕಾರಿ ಬದಲಿ ಪಕ್ಷವಾಗಿ ನೋಡುತ್ತಿಲ್ಲ ಎಂದು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com