ಮಿಲಿಯನ್ ಫಾಲೋವರ್ಸ್ ಕ್ಲಬ್ ಸೇರಿದ ಆರ್ ಬಿಐ ಟ್ವಿಟರ್ ಖಾತೆ!

ಭಾರತೀಯ ರಿಸರ್ವ್ ಬ್ಯಾಂಕ್  ಒಂದು ಮಿಲಿಯನ್ ಟ್ವಿಟರ್ ಫಾಲೋರ್ವಸ್ ಹೊಂದುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ. ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕೇಂದ್ರಿಯ ಬ್ಯಾಂಕ್ ಎಂಬ ಖ್ಯಾತಿಗೊಳಗಾಗಿದೆ.
ಆರ್ ಬಿಐ
ಆರ್ ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್  ಒಂದು ಮಿಲಿಯನ್ ಟ್ವಿಟರ್ ಫಾಲೋರ್ವಸ್ ಹೊಂದುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ. ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕೇಂದ್ರಿಯ ಬ್ಯಾಂಕ್ ಎಂಬ ಖ್ಯಾತಿಗೊಳಗಾಗಿದೆ.

 ಅಮೆರಿಕಾದ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗಳನ್ನು ಟ್ವಿಟರ್ ನಲ್ಲಿ  ಹಿಂದಿಕ್ಕಿ, ಮೈಕ್ರೋಬ್ಲಾಗಿಂಗ್ ಸೈಟ್ ನಲ್ಲಿ  ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಅತ್ಯಂತ ಜನಪ್ರಿಯ ಕೇಂದ್ರಿಯ ಬ್ಯಾಂಕಾಗಿ ಹೊರಹೊಮ್ಮಿದೆ.

ಆರ್ ಬಿಐ ಟ್ವೀಟರ್ ಖಾತೆಯಲ್ಲಿ ಲಭ್ಯವಿರುವ ಹೊಸ ಮಾಹಿತಿ ಪ್ರಕಾರ, ಸೆಪ್ಟೆಂಬರ್ 27 ರಂದು 9 ಲಕ್ಷ 66 ಸಾವಿರ ಇದ್ಧ ಫಾಲೋವರ್ಸ್ ಸಂಖ್ಯೆ ಇದೀಗ 1 ಮಿಲಿಯನ್ ಅಥವಾ 10 ಲಕ್ಷಕ್ಕೆ ಫಾಲೋವರ್ಸ್ ಸಂಖ್ಯೆ ಏರಿಕೆಯಾಗಿದೆ.

ಆರ್ ಬಿಐ ಟ್ವಿಟರ್ ಖಾತೆ ಒಂದು ಮಿಲಿಯನ್ ಫಾಲೋವರ್ಸ್ ಗಳನ್ನು ಇಂದು ಹೊಂದಿರುವುದು ಹೊಸ ಮೈಲುಗಲ್ಲು ಆಗಿದೆ. ಆರ್ ಬಿಐನಲ್ಲಿನ ಎಲ್ಲಾ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಗೌರ್ನರ್ ಶಕ್ತಿಕಾಂತ್ ದಾಸ್ ಭಾನುವಾರ ಟ್ವೀಟ್ ಮಾಡಿದ್ದಾರೆ.

ಆರ್ ಬಿಐ ಗೆ ವಿರುದ್ಧವಾಗಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಕೇವಲ 6 ಲಕ್ಷದ 67 ಸಾವಿರ ಫಾಲೋವರ್ಸ್ ಹೊಂದಿದ್ದರೆ ಯುರೋಪಿಯನ್ ಕೇಂದ್ರಿಯ ಬ್ಯಾಂಕ್ 5 ಲಕ್ಷದ 91 ಸಾವಿರದ ಫಾಲೋವರ್ಸ್ ಗಳನ್ನು ಮಾತ್ರ ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com