ಉರ್ದು ಭಾಷೆಯಲ್ಲಿ ಎಐಎಂಐಎಂ ಶಾಸಕ ಪ್ರಮಾಣ ವಚನ ಸ್ವೀಕರ; 'ಹಿಂದೂಸ್ತಾನ್' ಪದ ಬದಲಿಸುವಂತೆ ಒತ್ತಾಯ!

ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಅದರ ಕರಡಿನಲ್ಲಿರುವ 'ಹಿಂದೂಸ್ತಾನ್' ಪದವನ್ನು ಸಂವಿಧಾನದಲ್ಲಿರುವಂತೆ 'ಭಾರತ್' ಎಂದು ಬದಲಾಯಿಸಬೇಕೆಂದು ಎಐಎಂಐಎಂ ಶಾಸಕರೊಬ್ಬರು, ಒತ್ತಾಯಿಸಿದ್ದರಿಂದ ಬಿಹಾರ ವಿಧಾಸಭೆಯಲ್ಲಿ ವಿವಾದವೊಂದು ತಲೆದೋರಿತು.

Published: 23rd November 2020 05:12 PM  |   Last Updated: 23rd November 2020 06:12 PM   |  A+A-


AIMIM_MLA_IMAN1

ಎಐಎಂಐಎಂ ಶಾಸಕ ಇಮಾನ್

Posted By : Nagaraja AB
Source : The New Indian Express

ಪಾಟ್ನಾ: ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಅದರ ಕರಡಿನಲ್ಲಿರುವ 'ಹಿಂದೂಸ್ತಾನ್' ಪದವನ್ನು ಸಂವಿಧಾನದಲ್ಲಿರುವಂತೆ  'ಭಾರತ್' ಎಂದು ಬದಲಾಯಿಸಬೇಕೆಂದು ಎಐಎಂಐಎಂ ಶಾಸಕರೊಬ್ಬರು, ಒತ್ತಾಯಿಸಿದ್ದರಿಂದ ಬಿಹಾರ ವಿಧಾಸಭೆಯಲ್ಲಿ ವಿವಾದವೊಂದು ತಲೆದೋರಿತು.

ಎಐಐಎಂಐಎಂನ ರಾಜ್ಯ ಅಧ್ಯಕ್ಷ ಅಖ್ತರುಲ್ ಇಮಾನ್  ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಈ ಬೇಡಿಕೆ ಸಲ್ಲಿಸಿದರು. ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಝಿ, ಸಭೆಯ ಪ್ರಕಾರ ಉರ್ದುವಿನಲ್ಲಿ ಪ್ರಮಾಣವಚನ ಸ್ವೀಕರಿಸುವವರ ಹಿಂದೂಸ್ತಾನ್ ಪದ ಹೇಳಬಹುದು ಎಂದರು. ಆದಾಗ್ಯೂ, ಭಾರತ್ ಪದ ಬಳಕೆಗೂ ಅವಕಾಶ ನೀಡಲಾಯಿತು.

ನಂತರ ಪ್ರತಿಕ್ರಿಯಿಸಿದ ಶಾಸಕ, ನಾನು ಯಾವುದೇ ಆಕ್ಷೇಪಣೆಗಳನ್ನು ಎತ್ತಿಲ್ಲ. ಸಂವಿಧಾನದ ಮುನ್ನುಡಿಯನ್ನು ಓದಿದಾಗಲೆಲ್ಲಾ, ಅದು ಭಾರತ್ ಪದವನ್ನು ಉಲ್ಲೇಖಿಸುತ್ತದೆಂದು  ಸರಳವಾಗಿ ಹೇಳಿದ್ದೇನೆ. ಇದರ ಹಿನ್ನೆಲೆಯಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ, ನಮ್ಮ ದೇಶದ ಹೆಸರನ್ನು ಬಳಸುವುದು ಸೂಕ್ತವಾಗಿರುತ್ತದೆ ಎಂದರು.

ಇಕ್ಬರ್ ಅವರ ಪ್ರಸಿದ್ಧ 'ಸಾರೇ ಜಹಾನ್ ಸೆ ಹಚ್ಚಾ, ಹಿಂದೂಸ್ತಾನ್ ಅಮರಾ' ಗೀತೆ ಕೇಳುತ್ತಾ ಬೆಳೆದ ನನಗೆ ಹಿಂದೂಸ್ಥಾನ್ ಪದದ ಬಗ್ಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಖಾನ್ ನಂತಹ ನಾಯಕರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಆದ್ಯತೆ ನೀಡಿದ  ವೈಯಕ್ತಿಕ ಆಯ್ಕೆ ಯನ್ನು ಶ್ಲಾಘಿಸಿದರು.

ಆದಾಗ್ಯೂ, ಈ ಬೆಳವಣಿಗೆ ಅಸಹ್ಯಕಾರಿ ಎಂದು ಆಡಳಿತರೂಢ ಎನ್ ಡಿಎ ಪ್ರತಿಕ್ರಿಯಿಸಿತು. ಹಿಂದೂಸ್ತಾನ್ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತಿದೆ. ಆದಾಗ್ಯೂ, ಕೆಲವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಮಾಜಿ ಸಚಿವ ಜೆಡಿಯು ಶಾಸಕ ಮಾದನ್ ಶಾಹ್ನಿ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೂಸ್ತಾನ್ ಪದ ಉಚ್ಚರಣೆಯಿಂದ ತೊಂದರೆ ಇರುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಿಜೆಪಿ ಶಾಸಕ ನೀರಾಜ್ ಸಿಂಗ್ ಬಬ್ಲು ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp