ರಚನಾತ್ಮಕ ವರದಿಗಳಿಗೆ ಮಾಧ್ಯಮಗಳ ಬಳಿ ಸಮಯವೇ ಇಲ್ಲ: ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮದ ಬಗ್ಗೆ ಜಾವ್ಡೇಕರ್ ಬೇಸರ

ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮದ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ರಚನಾತ್ಮಕ ವರದಿಗಳಿಗೆ ಮಾಧ್ಯಮಗಳ ಬಳಿ ಸಮಯವೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ರಚನಾತ್ಮಕ ವರದಿಗಳಿಗೆ ಮಾಧ್ಯಮಗಳ ಬಳಿ ಸಮಯವೇ ಇಲ್ಲ: ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮದ ಬಗ್ಗೆ ಜಾವ್ಡೇಕರ್ ಬೇಸರ
ರಚನಾತ್ಮಕ ವರದಿಗಳಿಗೆ ಮಾಧ್ಯಮಗಳ ಬಳಿ ಸಮಯವೇ ಇಲ್ಲ: ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮದ ಬಗ್ಗೆ ಜಾವ್ಡೇಕರ್ ಬೇಸರ

ನವದೆಹಲಿ: ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮದ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ರಚನಾತ್ಮಕ ವರದಿಗಳಿಗೆ ಮಾಧ್ಯಮಗಳ ಬಳಿ ಸಮಯವೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
 
ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಬೇಕು ಹಾಗೂ ಆ ಸ್ವಾತಂತ್ರ್ಯ ಜವಾಬ್ದಾರಿಯೊಂದಿಗೆ ಬರುತ್ತದೆ ಎಂಬುದನ್ನು ಮರೆಯಬಾರದು ಎಂದು ಜಾವ್ಡೇಕರ್ ಹೇಳಿದ್ದಾರೆ. 

50,000 ಮನೆಗಳಲ್ಲಿ ಅಳವಡಿಕೆ ಮಾಡಲಾಗಿರುವ ಮೀಟರ್ ಗಳು ಕೋಟ್ಯಂತರ ಜನರ ಅಭಿಪ್ರಾಯಗಳನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ ಎಂದು ಜಾವ್ಡೇಕರ್ ಹೇಳಿದ್ದಾರೆ. 

ಐಐಎಂಸಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಾವ್ಡೇಕರ್ ಟಿಆರ್ ಪಿ ಕೇಂದ್ರಿತ ಪತ್ರಿಕೋದ್ಯಮ ಒಳ್ಳೆಯದಲ್ಲ, 22 ಕೋಟಿ ಜನರ ಅಭಿಪ್ರಾಯವನ್ನು 50,000 ಮನೆಗಳು ಅಳೆಯುವುದಕ್ಕೆ ಸಾಧ್ಯವಿಲ್ಲ. ಇವುಗಳನ್ನು ಏರಿಕೆ ಮಾಡಬೇಕೆಂದು ಜಾವ್ಡೇಕರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com