ಇನ್ನು ಮುಂದೆ ಆಯುರ್ವೇದ ವೈದ್ಯರೂ ಶಸ್ತ್ರಚಿಕಿತ್ಸೆ ನಡೆಸಬಹುದು!

ವೈದ್ಯಕೀಯ ಸಮೂಹಕ್ಕೆ ಶಾಕ್ ನೀಡಿರುವ ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ತರಬೇತಿ ನೀಡಿ, ಅವರು ಶಸ್ತ್ರಚಿಕಿತ್ಸೆ ಮಾಡಲು ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡುವ ಅಧಿಸೂಚನೆ ಹೊರಡಿಸಿದೆ. 
ಇನ್ನು ಮುಂದೆ ಆಯುರ್ವೇದ ವೈದ್ಯರೂ ಶಸ್ತ್ರಚಿಕಿತ್ಸೆ ನಡೆಸಬಹುದು!
ಇನ್ನು ಮುಂದೆ ಆಯುರ್ವೇದ ವೈದ್ಯರೂ ಶಸ್ತ್ರಚಿಕಿತ್ಸೆ ನಡೆಸಬಹುದು!

ನವದೆಹಲಿ: ವೈದ್ಯಕೀಯ ಸಮೂಹಕ್ಕೆ ಶಾಕ್ ನೀಡಿರುವ ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ತರಬೇತಿ ನೀಡಿ, ಅವರು ಶಸ್ತ್ರಚಿಕಿತ್ಸೆ ಮಾಡಲು ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡುವ ಅಧಿಸೂಚನೆ ಹೊರಡಿಸಿದೆ. 

ಭಾರತೀಯ ವೈದ್ಯಕೀಯ ಪರಿಷತ್ ಕೇಂದ್ರದ ಅಧ್ಯಕ್ಷರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಆಯುರ್ವೇದ ಚಿಕಿತ್ಸಾಲಯ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ, ಇಎನ್ ಟಿ, ಮೂಳೆ, ಹಲ್ಲುಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಕನಿಷ್ಟ 25  ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈಗ ಇದನ್ನು ಕಾನೂನುಬದ್ಧವೆಂದು ತಿಳಿಸುವುದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. 

ಆಯುರ್ವೇದದಲ್ಲಿ ಶಲ್ಯ ತಂತ್ರ (ಸಾಮಾನ್ಯ ಶಸ್ತ್ರ ಚಿಕಿತ್ಸೆ), ಶಲಾಕ್ಯ ತಂತ್ರ ( ಕಣ್ಣು, ತಲೆ, ಮೂಗು, ಕಿವಿ, ಗಂಟಲು ಶಸ್ತ್ರಚಿಕಿತ್ಸೆ)ಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರಿಗೆ ಇನ್ನು ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಸಾಧ್ಯವಾಗುವಂತೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com