ಒಡಿಶಾ ರಾಜ್ಯಪಾಲರ ಪತ್ನಿ ಸುಶೀಲಾ ದೇವಿ ಕೊರೋನಾಗೆ ಬಲಿ

ಒಡಿಶಾ ರಾಜ್ಯಪಾಲ ಪ್ರೊ. ಗಣೇಶಿ ಲಾಲ್ ಪತ್ನಿ ಸುಶೀಲಾ ದೇವಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನವೆಂಬರ್ 2 ರಂದು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ರಾಜ್ಯದ ಮೊದಲ ಮಹಿಳೆ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಶೀಲಾ ದೇವಿ
ಸುಶೀಲಾ ದೇವಿ

ಭುಬನೇಶ್ವರ: ಒಡಿಶಾ ರಾಜ್ಯಪಾಲ ಪ್ರೊ. ಗಣೇಶಿ ಲಾಲ್ ಪತ್ನಿ ಸುಶೀಲಾ ದೇವಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ನವೆಂಬರ್ 2 ರಂದು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ರಾಜ್ಯದ ಮೊದಲ ಮಹಿಳೆ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇನ್ನೂ ಸುಶೀಲಾ ದೇವಿ ನಿಧನಕ್ಕೆ ಸಿಎಂ ನವೀನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಆಂಧ್ರಪ್ರದೇಶ ರಾಜ್ಯಪಾಲ ಬಿಸ್ವಾ ಭೂಷಣ್ ಮತ್ತು ಕೇಂದ್ರ ಸಚಿವ  ಧರ್ಮೇಂದ್ರ ಪ್ರಧಾನ್ ಸುಶೀಲಾ ದೇವಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com