ಕೋವಿಡ್‌ ಲಸಿಕೆ ಕುರಿತು ಪ್ರಧಾನಿ ಮೋದಿ ಸ್ಪಷ್ಟನೆ ನೀಡಲಿ: ರಾಹುಲ್‌ ಒತ್ತಾಯ

ದೇಶದ ಬಹುದೊಡ್ಡ ಔಷಧಿ ಕಂಪನಿಗಳು ಕೋವಿಡ್‌ ಲಸಿಕೆ ತಯಾರಿಸುವಲ್ಲಿ ಮಗ್ನವಾಗಿರುವ ಬೆನ್ನಲ್ಲೇ, ಲಸಿಕೆ ಕುರಿತು ಸ್ಪಷ್ಟನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ದೇಶದ ಬಹುದೊಡ್ಡ ಔಷಧಿ ಕಂಪನಿಗಳು ಕೋವಿಡ್‌ ಲಸಿಕೆ ತಯಾರಿಸುವಲ್ಲಿ ಮಗ್ನವಾಗಿರುವ ಬೆನ್ನಲ್ಲೇ, ಲಸಿಕೆ ಕುರಿತು ಸ್ಪಷ್ಟನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

ಈ ಕುರಿತು ಗೋವಾದಿಂದ ಟ್ವೀಟ್‌ ಮಾಡಿರುವ ರಾಹುಲ್‌, "ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಕೋವಿಡ್‌ ಲಸಿಕೆ ತಯಾರಿಸುವ ಸಂಸ್ಥೆಗಳ ಬಗ್ಗೆ, ಅವುಗಳಲ್ಲಿ ಯಾವುದಕ್ಕೆ ಆದ್ಯತೆ ನೀಡಲಿದೆ ಮತ್ತು ಏಕೆ ಎಂಬುದರ ಕುರಿತು ಮಾಹಿತಿ ನೀಡಬೇಕು. ಯಾರಿಗೆ ಲಸಿಕೆ ಮೊದಲು ದೊರೆಯಲಿದೆ ಮತ್ತು ಅದರ ವಿತರಣೆಯ ತಂತ್ರಗಾರಿಕೆಯೇನು ಎಂಬುದನ್ನು ತಿಳಿಸಬೇಕು" ಎಂದು ಒತ್ತಾಯಿಸಿದ್ದಾರೆ.

"ಪಿಎಂ ಕೇರ್‌ ನಿಧಿಯ ಮೊತ್ತವನ್ನು ಉಚಿತ ಲಸಿಕೆಯನ್ನುಖಾತರಿಪಡಿಸಲು ಬಳಸಲಾಗುತ್ತದೆ. ಯಾವಾಗ ಎಲ್ಲಾ ಭಾರತೀಯರಿಗೆ ಲಸಿಕೆ ದೊರೆಯುತ್ತದೆ?" ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com