ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದೆ: ಎಡಿಟರ್ಸ್ ಗಿಲ್ಡ್

ಶಿಲ್ಲಾಂಗ್ ಟೈಮ್ಸ್ ನ ಸಂಪಾದಕರಾದ ಪೆಟ್ರೀಷಿಯಾ ಮುಖಿಮ್ ಅವರ ವಿರುದ್ಧ ಕ್ರಿಮಿನಲ್ ನಡಾವಳಿಗಳನ್ನು ರದ್ದು ಮಾಡುವುದಕ್ಕೆ ಅನುಮತಿ ನೀಡದ ಮೇಘಾಲಯ ಹೈಕೋರ್ಟ್ ನ ನಡೆಯ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.
ಪೆಟ್ರೀಷಿಯಾ ಮುಖಿಮ್
ಪೆಟ್ರೀಷಿಯಾ ಮುಖಿಮ್

ಮೇಘಾಲಯ: ಶಿಲ್ಲಾಂಗ್ ಟೈಮ್ಸ್ ನ ಸಂಪಾದಕರಾದ ಪೆಟ್ರೀಷಿಯಾ ಮುಖಿಮ್ ಅವರ ವಿರುದ್ಧ ಕ್ರಿಮಿನಲ್ ನಡಾವಳಿಗಳನ್ನು ರದ್ದು ಮಾಡುವುದಕ್ಕೆ ಅನುಮತಿ ನೀಡದ ಮೇಘಾಲಯ ಹೈಕೋರ್ಟ್ ನ ನಡೆಯ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.

ಮುಖಿಮ್ ಅವರು ತಮಗೆ ಆದ ಅನ್ಯಾಯದ ಬಗ್ಗೆ ಸೂಕ್ತ ಸಮಯದಲ್ಲಿ ಎಡಿಟರ್ಸ್ ಗಿಲ್ಡ್ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಕೇವಲ ಖ್ಯಾತ ಪತ್ರಕರ್ತರಿಗೆ ಮಾತ್ರ ಎಡಿಟರ್ಸ್ ಗಿಲ್ಡ್ ಹೇಳಿಕೆ ಬಿಡುಗಡೆ ಮಾಡುತ್ತದೆ ಎಂದು ಆಕ್ಷೇಪಿಸಿ ಎಡಿಟರ್ಸ್ ಗಿಲ್ಡ್ ಗೆ ರಾಜೀನಾಮೆ ನೀಡಿದ್ದರು. 

ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಎಡಿಟರ್ಸ್ ಗಿಲ್ಡ್ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದೆ, ಹಲವಾರು ಕಾನೂನುಗಳ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವುದಕ್ಕೆ ಮುಖಿಮ್ ಅವರ ಪ್ರಕರಣವೇ ಉದಾಹರಣೆಯಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ಉನ್ನತ ಮಟ್ಟದ ನ್ಯಾಯಪೀಠ ವಾಕ್ ಸ್ವಾತಂತ್ರ್ಯ ಹರಣವಾಗುತ್ತಿರುವುದನ್ನು ಗಮನಿಸಬೇಕು ಹಾಗೂ ಮಾಧ್ಯಮಗಳು ಸರಾಗವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುವಂತೆ ಮಾಡಬೇಕು ಎಂದು ಎಡಿಟರ್ಸ್ ಗಿಲ್ಡ್ ಮನವಿ ಮಾಡಿದೆ.

ಸರ್ಕಾರವನ್ನು ಪ್ರಶ್ನಿಸುವುದು ಮಾಧ್ಯಮಗಳ ಜವಾಬ್ದಾರಿ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ. ಮೇಘಾಲಾಯದಲ್ಲಿ ಬುಡಕಟ್ಟು ಹೊರತಾದವರ ಮೇಲಿನ ದಾಳಿ ಮುಂದುವರೆದಿದ್ದು, ಇವುಗಳನ್ನು ಶಿಕ್ಷಿಸದೇ ಬಿಡಲಾಗಿದೆ, ಇದು ಸರ್ಕಾರದ ವೈಫಲ್ಯ ಎಂದು ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ನಡವಾಳಿಗೆ ಕ್ರಮ ಜರುಗಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com