43 ಆ್ಯಪ್ ಬ್ಯಾನ್ ಮಾಡಿ ಮತ್ತೆ ಚೀನಾಗೆ ಶಾಕ್ ಕೊಟ್ಟ ಭಾರತ: ಬ್ಯಾನ್ ಆಗಿರುವ ಆ್ಯಪ್ ಗಳ ಪಟ್ಟಿ!

ರಾಷ್ಟ್ರೀಯ ಭದ್ರತೆ, ಗ್ರಾಹಕ ಸುರಕ್ಷತೆ ಮತ್ತು ಹಿತಾಸಕ್ತಿ ರಕ್ಷಣೆಯ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 43 ಆ್ಯಪ್ ಗಳನ್ನು ಬ್ಯಾನ್ ಮಾಡಿದೆ.

Published: 24th November 2020 05:58 PM  |   Last Updated: 24th November 2020 05:58 PM   |  A+A-


Apps

ಆ್ಯಪ್

Posted By : Vishwanath S
Source : Online Desk

ನವದೆಹಲಿ: ರಾಷ್ಟ್ರೀಯ ಭದ್ರತೆ, ಗ್ರಾಹಕ ಸುರಕ್ಷತೆ ಮತ್ತು ಹಿತಾಸಕ್ತಿ ರಕ್ಷಣೆಯ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 43 ಆ್ಯಪ್ ಗಳನ್ನು ಬ್ಯಾನ್ ಮಾಡಿದೆ. 

ಲಡಾಕ್ ಮತ್ತು ಗಲ್ವಾನ್ ಕಣಿವೆಯ ಗಡಿ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಹಳಸಿದೆ. ಚೀನಾಗೆ ಬುದ್ಧಿ ಕಲಿಸುವ ಸಲುವಾಗಿ ಕೇಂದ್ರ ಸರ್ಕಾರ ಚೀನಾ ಮೂಲದ ಸರಕುಗಳನ್ನು ಮಾತ್ರವಲ್ಲದೆ, ಆ್ಯಪ್, ಡಿಜಿಟಲ್ ಸೇವೆಗಳನ್ನು ಕೂಡ ಹಂತಹಂತವಾಗಿ ನಿಷೇಧಿಸುತ್ತಿದೆ. 

ಕೇಂದ್ರ ಸರ್ಕಾರ ಇಲ್ಲಿಯವರೆಗೂ ಚೀನಾದ ಒಟ್ಟು 228 ಆ್ಯಪ್ ಗಳನ್ನು ಬ್ಯಾನ್ ಮಾಡಿದ್ದು ಇದೀಗ ಮತ್ತೆ 43 ಆ್ಯಪ್ ಅನ್ನು ನಿಷೇಧಿಸಿದೆ. 

ಆ್ಯಪ್ ಪಟ್ಟಿ:

1. ಅಲಿಸಪ್ಲಿಯರ್ಸ್ ಮೊಬೈಲ್ ಅಪ್ಲಿಕೇಶನ್
2. ಅಲಿಬಾಬಾ ವರ್ಕ್‌ಬೆಂಚ್
3. ಅಲಿಎಕ್ಸ್ಪ್ರೆಸ್ - ಸ್ಮಾರ್ಟರ್ ಶಾಪಿಂಗ್
4. ಅಲಿಪೇ ಕ್ಯಾಷಿಯರ್
5. ಲಾಲಮೋವ್ ಇಂಡಿಯಾ - ಡೆಲಿವರಿ ಅಪ್ಲಿಕೇಶನ್
6. ಲಾಲಮೋವ್ ಇಂಡಿಯಾ - ಡೆಲಿವರಿ ಆ್ಯಪ್ 
7. ಸ್ನ್ಯಾಕ್ ವಿಡಿಯೋ
8. ಕ್ಯಾಮ್‌ಕಾರ್ಡ್ - ಬಿಸಿನೆಸ್ ಕಾರ್ಡ್ ರೀಡರ್
9. ಕ್ಯಾಮ್‌ಕಾರ್ಡ್ - ಬಿಸಿಆರ್ (ವೆಸ್ಟರ್ನ್)
10. ಸೋಲ್- ಫಾಲೋ ದಿ ಸೋಲ್ ಟು ಫೈಂಡ್ ಯೂ
11. ಚೈನೀಸ್ ಸೋಷಿಯಲ್ - ಫ್ರೀ ಆನ್‌ಲೈನ್ ಡೇಟಿಂಗ್ ವೀಡಿಯೊ ಅಪ್ಲಿಕೇಶನ್ ಆ್ಯಂಡ್ ಚಾಟ್
12. ಡೇಟ್ ಇನ್ ಏಷ್ಯಾ - ಏಷ್ಯನ್ ಸಿಂಗಲ್ಸ್‌ ಡೇಟಿಂಗ್ ಆ್ಯಂಡ್ ಚಾಟ್
13. ವಿ ಡೇಟ್-ಡೇಟಿಂಗ್ ಅಪ್ಲಿಕೇಶನ್
14. ಫ್ಲೀ ಡೇಟಿಂಗ್ ಅಪ್ಲಿಕೇಶನ್- ಸಿಂಗೋಲ್!
15. ಅಡೋರ್ ಆ್ಯಪ್
16. ಟ್ರೂಲಿಚಿನೀಸ್ - ಚೈನೀಸ್ ಡೇಟಿಂಗ್ ಅಪ್ಲಿಕೇಶನ್
17. ಟ್ರೂಲಿ ಏಷ್ಯನ್ - ಏಷ್ಯನ್ ಡೇಟಿಂಗ್ ಅಪ್ಲಿಕೇಶನ್
18. ಚೈನ್‌ಲೋವ್: ಚೈನೀಸ್ ಸಿಂಗಲ್ಸ್‌ ಡೇಟಿಂಗ್ ಅಪ್ಲಿಕೇಶನ್
19. ಡೇಟ್‌ಮೈಜ್: ಚಾಟ್, ಮೀಟ್, ಡೇಟ್ ಮೆಚೂರ್ ಸಿಂಗಲ್ಸ್ ಆನ್‌ಲೈನ್
20. ಏಷ್ಯನ್ ಡೇಟ್
21. ಫ್ಲರ್ಟ್‌ವಿಶ್
22. ಗೈಸ್ ಓನ್ಲಿ ಡೇಟಿಂಗ್
23. ಟ್ಯೂಬಿಟ್: ಲೈವ್ ಸ್ಟ್ರೀಮ್‌
24. ವಿ ವರ್ಕ್ ಚೀನಾ
25. ಫಸ್ಟ್ ಲವ್ ಲೈವ್
26. ರೆಲಾ - ಲೆಸ್ಬಿಯನ್ ಸೋಷಿಯಲ್ ನೆಟ್ವರ್ಕ್
27. ಕ್ಯಾಷಿಯರ್ ವಾಲೆಟ್
28. ಮ್ಯಾಂಗೋ ಟಿವಿ
29. ಎಂಜಿಟಿವಿ- ಹುನಾನ್ ಟಿವಿ ಅಫಿಶಿಯಲ್ ಟಿವಿ ಆ್ಯಪ್
30. ವೀಟಿವಿ
31. ವೀಟಿವಿ - ಸಿಡ್ರಾಮಾ, ಕೆಡ್ರಾಮಾ ಆ್ಯಂಡ್ ಮೋರ್
32. ವೀಟಿವಿ ಲೈಟ್
33. ಲಕ್ಕಿ ಲೈವ್- ಲೈವ್ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್
34. ಟಾವೊಬಾವೊ ಲೈವ್
35. ಡಿಂಗ್‌ಟಾಕ್
36. ಐಡೆಂಟಿಟಿ ವಿ
37. ಐಸೊಲ್ಯಾಂಡ್ 2 
38. ಬಾಕ್ಸ್‌ಸ್ಟಾರ್ 
39. ಹೀರೋಸ್ ಇವೋಲ್ವೆಡ್
40. ಹ್ಯಾಪಿ ಫಿಶ್
41. ಜೆಲ್ಲಿಪಾಪ್ ಮ್ಯಾಚ್ 
42. ಮಂಚ್ಕಿನ್ ಮ್ಯಾಚ್: ಮ್ಯಾಜಿಕ್ ಮನೆ ಕಟ್ಟಡ 
43. ಕಾಂಕ್ವಿಸ್ಟಾ ಆನ್‌ಲೈನ್

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp