'ಮದುವೆಗಾಗಿ ಮತಾಂತರ ಒಪ್ಪಲಾಗದು' ಎಂಬ ತನ್ನ ಆದೇಶವನ್ನು ತಾನೇ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್
"ಕೇವಲ ವಿವಾಹದ ಉದ್ದೇಶಕ್ಕಾಗಿ" ಧಾರ್ಮಿಕ ಮತಾಂತರವನ್ನು ಸ್ವೀಕಾರಾರ್ಹವಲ್ಲ ಎಂದು ಈ ಹಿಂದೆ ತಾನೇ ನಿಡಿದ್ದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ರದ್ದು ಮಾಡಿದೆ.
Published: 24th November 2020 11:58 AM | Last Updated: 24th November 2020 12:25 PM | A+A A-

ಲಖನೌ: "ಕೇವಲ ವಿವಾಹದ ಉದ್ದೇಶಕ್ಕಾಗಿ" ಧಾರ್ಮಿಕ ಮತಾಂತರವನ್ನು ಸ್ವೀಕಾರಾರ್ಹವಲ್ಲ ಎಂದು ಈ ಹಿಂದೆ ತಾನೇ ನಿಡಿದ್ದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ರದ್ದು ಮಾಡಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ನವೆಂಬರ್ 1ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಈ ತೀರ್ಪನ್ನು ಉಲ್ಲೇಖಿಸಿದ ಕಾರಣ ತೀರ್ಪು ಮಹತ್ವ ಪಡೆದಿದೆ. ಈ ತೀರ್ಪು "ಲವ್ ಜಿಹಾದ್" ಅನ್ನು ಅಪರಾಧದ ವ್ಯಾಪ್ತಿಗೆ ತರುವ ಹೊಸ ಕಾನೂನಿಗೆ ಆಧಾರವಾಗಿದೆ. ಉತ್ತರ ಪ್ರದೇಶದ ನಿರ್ಧಾರದ ಬೆನ್ನಲ್ಲೇ "ಲವ್ ಜಿಹಾದ್" ವಿರುದ್ಧ ಕಾನೂನು ರೂಪಿಸಲು ಭಾರತೀಯ ಜನತಾ ಪಕ್ಷದ ಆಡಳಿತದ ರಾಜ್ಯಗಳಾದ ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಅಸೋಮ್ ಚಿಂತನೆ ನಡೆಸಿದೆ.
ಆದರೆ ಇದೀಗ ಅಲಹಾಬಾದ್ ಹೈಕೋರ್ಟ್ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ.
ನ್ಯಾಯಾಲಯದ ಆದೇಶವು ಮೂಲಭೂತವಾಗಿ ಮತಾಂತರವು ಮಾನ್ಯವೆ ಇಲ್ಲವೆ ಅನ್ನುವ ವಿಷಯಕ್ಕೆ ಸಂಬಂಧಿಸಿಲ್ಲ. ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವ ಹಕ್ಕನ್ನು ದೇಶ ಅಥವಾ ಇನ್ನಾರೂ ತಿರಸ್ಕರಿಸಲು ಸಾಧ್ಯವಿಲ್ಲ.
ಸೆಪ್ಟೆಂಬರ್ 29 ರಂದು ನ್ಯಾಯಮೂರ್ತಿ ಮಹೇಶ್ ತ್ರಿಪಾಠಿ ಅವರ ನ್ಯಾಯಪೀಠವು ವಿವಾಹಿತ ದಂಪತಿಗಳು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು, ಮಹಿಳೆ ಮುಸ್ಲಿಂ ಮತ್ತು ಮದುವೆಯಾಗಲು ಸಂಪೂರ್ಣವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ಗಮನಿಸಿ ಈ ತೀರ್ಮಾನ ತೆಗೆದುಕೊಂಡಿತ್ತು. . ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಲಾಗಿದ್ದರೂ ಸಹ ಅಕ್ಟೋಬರ್‌ನಲ್ಲಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳು ಪ್ರಸಾರವಾಗಿತ್ತು. . ಇದೇ ನ್ಯಾಯಾಲಯವು 2014 ರಲ್ಲಿ ಹೊರಡಿಸಿದ ಆದೇಶವನ್ನು ತ್ರಿಪಾಠಿ ಉಲ್ಲೇಖಿಸಿದ್ದು, ಇದೇ ರೀತಿಯ ಪ್ರಕರಣದಲ್ಲಿ ಒಂದು ಗುಂಪಿನ ರಿಟ್ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದಿದ್ದರು.
2014ರಲ್ಲಿ ನೂರ್ ಜಹಾನ್ ಎಂಬ ಮಹಿಳೆ ಹಿಂದೂ ಧರ್ಮದಿಂದ ಇಸ್ಲಾಂ ಗೆ ಮತಾಂತರಗೊಂಡ ನಂತರ ವಿವಾಹವಾಗಿದ್ದು ದಂಪತಿಗಳು ಪೋಲೀಸ್ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಗ ಅವರ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.