ದೆಹಲಿಯಲ್ಲಿ ಮೂರನೇ ಹಂತದ ಕೊರೋನಾ ಅಲೆಗೆ ಮಾಲಿನ್ಯ ಕೂಡ ಪ್ರಮುಖ ಕಾರಣ: ಪ್ರಧಾನಿಗೆ ಕೇಜ್ರಿವಾಲ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರನೇ ಹಂತದ ಕೊರೋನಾ ಪಸರಿಸಲು ಹಲವು ಕಾರಣಗಳಲ್ಲಿ ಮಾಲಿನ್ಯವೂ ಕೂಡ ಒಂದು ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
Published: 24th November 2020 02:05 PM | Last Updated: 24th November 2020 02:23 PM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರನೇ ಹಂತದ ಕೊರೋನಾ ಪಸರಿಸಲು ಹಲವು ಕಾರಣಗಳಲ್ಲಿ ಮಾಲಿನ್ಯವೂ ಕೂಡ ಒಂದು ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ನವೆಂಬರ್ 10 ರ ವರೆಗೆ ದೆಹಲಿಯಲ್ಲಿ ಕೊರೋನಾ ಸೋಂಕು ತುಂಬಾ ಅಧಿಕ ಪ್ರಮಾಣಕ್ಕೆ ತಲುಪಿದೆ.
ದೆಹಲಿಯಲ್ಲಿ ಮೂರನೇ ಹಂತದ ಕೊರೋನಾ ವ್ಯಾಪಿಸಿದ್ದು ಪ್ರಕರಣಗಳು ಕಡಿಮೆಯಾಗಿತ್ತು ಇದೇ ರೀತಿ ಮುಂದಿನ ದಿನಗಳಲ್ಲಿ ಕೇಸುಗಳು ಕಡಿಮೆಯಾಗಲಿವೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ದೆಹಲಿಯಲ್ಲಿ ಮೂರನೇ ಹಂತದ ಕೊರೋನಾಗೆ ಹಲವು ಅಂಶಗಳು ಕಾರಣವಾಗಿವೆ, ಅದರಲ್ಲಿ ಮಾಲಿನ್ಯ ಪ್ರಮುಖ ಕಾರಣವಾಗಿದೆ, ಪಕ್ಕದ ರಾಜ್ಯಗಳಲ್ಲಿ ಜೈವಿಕ ವಿಭಜಕದಿಂದ ಮಾಲಿನಯದ ಪ್ರಮಾಣ ಹೆಚ್ಚುತ್ತಿದ್ದು, ಅದು ದೆಹಲಿಗೂ ವ್ಯಾಪಿಸುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ದೆಹಲಿಯ ಕೊರೋನಾ ರೋಗಿಗಳಿಗಾಗಿ ಸುಮಾರು 1000 ಐಸಿಯು ಬೆಡ್ ಮೀಸಲಿರಿಸುವಂತೆ ಕೇಜ್ರಿವಾಲ್ ಪ್ರಧಾನಮಂತ್ರಿಯವರಲ್ಲಿ ಕೋರಿದ್ದಾರೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರದಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫ್ ರೆನ್ಸ್ ನಡೆಸಿದರು.