
ಭೂಮಿಗೆ ಅಪ್ಪಳಿಸಲು ಪ್ರಾರಂಭಿಸಿದ ನಿವಾರ್ ಚಂಡಮಾರುತ: ಗಾಳಿಯ ವೇಗ ಗಂಟೆಗೆ 145 ಕಿ.ಮೀ
ಚೆನ್ನೈ: ನಿವಾರ್ ಚಂಡಮಾರುತ ಸಮುದ್ರದಿಂದ ಭೂಪ್ರದೇಶಕ್ಕೆ ಅಪ್ಪಳಿಸಲು ಪ್ರಾರಂಭವಾಗಿದೆ.
ಚೆನ್ನೈ ನ ಐಎಂಡಿ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ ಚಂಡಮಾರತದ ಕೇಂದ್ರ ಅಥವಾ ಕಣ್ಣು ಈಗ ಮರಕ್ಕಣಂ ದಾಟಿದ್ದು ಇನ್ನು ಮೂರು ಗಂಟೆಗಳ ಅವಧಿಯಲ್ಲಿ ಪುದುಚೆರಿಯನ್ನು ದಾಟಲಿದ್ದು ಗಾಳಯ ವೇಗ ಪ್ರತಿ ಗಂಟೆಗೆ 120-130 ಕಿ.ಮೀ ವೇಗದಲ್ಲಿ ದಾಟಲಿದ್ದು ಪ್ರತಿ ಗಂಟೆಗೆ 145 ಕಿ. ಮಿ ವರೆಗೂ ತಲುಪಲಿದೆ.
Heavy downpour with violent thunders in Villupuram in the last few minutes as #NivarCyclone commenced landfall at Marakannam. Power supply stopped in the municipal areas.@xpresstn
— Krithika Srinivasan / كريتيكا سرينيواسن (@krithika_writes) November 25, 2020
ಚಂಡಮಾರುತ ಸಮುದ್ರ ಪ್ರದೇಶದಿಂದ ಭೂ ಪ್ರದೇಶಕ್ಕೆ ಅಪ್ಪಳಿಸುತ್ತಿದ್ದಂತೆಯೇ ವಿಲ್ಲುಪುರಂ ಸೇರಿದಂತೆ ಹಲವೆಡೆ ಕುಂಭದ್ರೋಣ ಮಳೆ ಪ್ರಾರಂಭವಾಗಿದ್ದು ವಿದ್ಯುತ್ ಪೂರೈಕೆಯೂ ವ್ಯತ್ಯಯವಾಗಿದೆ.
ಚಂಡಮಾರುತದ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಎನ್ ಡಿಆರ್ ಎಫ್ ಈಗಾಗಲೇ ಹಲವು ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ಈ ತಂಡಗಳು ತೊಡಗಲಿವೆ.
ತಮಿಳುನಾಡಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಪಾಂಡಿಚೆರಿಗಳಲ್ಲಿ 1,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.