ಬಿಜೆಪಿ ನನ್ನನ್ನು ಬಂಧಿಸಿದರೂ, ಜೈಲಿನಿಂದಲೇ ಚುನಾವಣೆಯಲ್ಲಿ ಟಿಎಂಸಿಯನ್ನು ಗೆಲ್ಲಿಸುತ್ತೇನೆ: ಮಮತಾ ಬ್ಯಾನರ್ಜಿ

ಬಿಜೆಪಿಯನ್ನು "ಸುಳ್ಳಿನ ಕಸ" ಮತ್ತು "ರಾಷ್ಟ್ರದ ಅತಿದೊಡ್ಡ ಶಾಪ" ಎಂದು ಜರಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಸರಿ ಪಕ್ಷ ನನ್ನನ್ನು ಬಂಧಿಸಿದರೂ ಮುಂಬರುವ ಚುನಾವಣೆಯಲ್ಲಿ ಜೈಲಿನಿಂದಲೇ ತಾವು ಟಿಎಂಸಿಯನ್ನು ಗೆಲ್ಲಿಸುವುದಾಗಿ ಬುಧವಾರ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಬಂಕುರಾ: ಬಿಜೆಪಿಯನ್ನು "ಸುಳ್ಳಿನ ಕಸ" ಮತ್ತು "ರಾಷ್ಟ್ರದ ಅತಿದೊಡ್ಡ ಶಾಪ" ಎಂದು ಜರಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಸರಿ ಪಕ್ಷ ನನ್ನನ್ನು ಬಂಧಿಸಿದರೂ ಮುಂಬರುವ ಚುನಾವಣೆಯಲ್ಲಿ ಜೈಲಿನಿಂದಲೇ ತಾವು ಟಿಎಂಸಿಯನ್ನು ಗೆಲ್ಲಿಸುವುದಾಗಿ ಬುಧವಾರ ಹೇಳಿದ್ದಾರೆ.

294 ಸದಸ್ಯ ಬಲ ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್-ಮೇ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಟಿಎಂಸಿ ಶಾಸಕರಿಗೆ ಲಂಚ ನೀಡಲು ಯತ್ನಿಸುವ ಮೂಲಕ ಬಿಜೆಪಿ ಶಾಸಕರ ಖರೀದಿಗೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಮಮತಾ, ನೇರವಾಗಿ ಯಾರ ಹೆಸರನ್ನು ಪ್ರಸ್ತಾಪಿಸದೆ, ಕೆಲವರು ಕೇಸರಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಲ್ಲಿದ್ದಾರೆ ಎಂದರು.

"ಬಿಜೆಪಿ ರಾಜಕೀಯ ಪಕ್ಷವಲ್ಲ, ಸುಳ್ಳಿನ ಕಸ. ಚುನಾವಣೆ ಬಂದಾಗಲೆಲ್ಲಾ ಅವರು ಟಿಎಂಸಿ ನಾಯಕರನ್ನು ಬೆದರಿಸಲು ನಾರದ (ಕುಟುಕು ಕಾರ್ಯಾಚರಣೆ) ಮತ್ತು ಶಾರದಾ (ಹಗರಣ) ವಿಷಯವನ್ನು ತರುತ್ತಾರೆ ಎಂದು ದೀದಿ ವಾಗ್ದಾಳಿ ನಡೆಸಿದರು.

"ಆದರೆ ಅವರಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ, ನಾನು ಬಿಜೆಪಿ ಅಥವಾ ಅದರ ಏಜೆನ್ಸಿಗಳಿಗೆ ಹೆದರುವುದಿಲ್ಲ. ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಿ ಜೈಲಿಗೆ ಹಾಕಲಿ. ನಾನು ಜೈಲಿನಿಂದಲೇ ಚುನಾವಣೆಗಳಲ್ಲಿ ಹೋರಾಡುತ್ತೇನೆ ಮತ್ತು ಟಿಎಂಸಿಯ ವಿಜಯವನ್ನು ಖಚಿತಪಡಿಸಿಕೊಳ್ಳುತ್ತೇನೆ" ಎಂದು ಮಮತಾ ಬ್ಯಾನರ್ಜಿ ಅವರು ಕೋವಿಡ್-19 ನಂತರ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com